ನನ್ನ ಆತ್ಮಹತ್ಯೆಗೆ ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ಕಾರಣ;  ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪತ್ನಿ

ನನ್ನ ಆತ್ಮಹತ್ಯೆಗೆ ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ಕಾರಣ; ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪತ್ನಿ

 

ಬೆಂಗಳೂರು: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಗೃಹಿಣಿಯೋರ್ವಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆಬಂದಿದೆ.

ಪತಿ ಹಾಗೂ ಆತನ ಗರ್ಲ್ ಫ್ರೆಂಡ್  ವಿರುದ್ದ ಡೆತ್ ನೋಟ್ ಬರೆದಿಟ್ಟು ಹೆಗ್ಗನಹಳ್ಳಿ ನಿವಾಸಿ ಪವಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್ ನೋಟ್ ಬರೆದಿಟ್ಟು ವಾಟ್ಸಾಪ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾಳೆ. ಮೃತ ಪವಿತ್ರಾ ಮೊದಲ ಪತಿಗೆ ವಿಚ್ಚೇದನ ನೀಡಿ, ಚೇತನ್ ಗೌಡ ಎಂಬಾತನನ್ನು ಎರಡನೇ ಮದುವೆಯಾಗಿದ್ದಳು. ಪವಿತ್ರಾಳ ಎರಡನೇ ಪತಿ ಚೇತನ್ ಗೌಡ  ಉದ್ಯಮಿಯಾಗಿದ್ದು, ಪವಿತ್ರ ಚೇತನ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು. ಇತ್ತೀಚೆಗೆ ಮತ್ತೊರ್ವ ಯುವತಿಯ ವಿಚಾರವಾಗಿ ಪತಿ ಪತ್ನಿ ಮಧ್ಯೆ ಜಗಳವಾಗ್ತಿತ್ತು. ಈ ಬಗ್ಗೆ ಪವಿತ್ರ ತನ್ನ ತಾಯಿ ಪದ್ಮಮ್ಮ ಬಳಿ ತಿಳಿಸಿದ್ದಳು.  ಕಡೆಗೆ ಮನನೊಂದು ಡೆತ್ ನೋಟ್ ವಾಟ್ಸಾಫ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾಳೆ.

ನನ್ನ ಸಾವಿಗೆ ಗಂಡನಾದ ಚೇತನ್ ಗೌಡ ಹಾಗೂ ಪೂಜಾ ಗೌಡ ಕಾರಣರಾಗಿರುತ್ತಾರೆ. 2019ರ ಮೇ 26ರಲ್ಲಿ ಚೇತನ್ ಗೌಡ ಜೊತೆ ಮದುವೆ ಆಗಿದ್ದೇನೆ. ಬಳಿಕ ಚೇತನ್ ಗೌಡ, ಪೂಜಾ ಗೌಡ ಎಂಬ ಯುವತಿಯ ಜೊತೆ ಅಕ್ರಮ ಸಂಬಂದ ಇಟ್ಟುಕೊಂಡಿರುತ್ತಾನೆ. ಅಕ್ರಮ ಸಂಬಂದ ಇಟ್ಟುಕೊಂಡ ಬಳಿಕ ನನಗೆ ಸಾಕಷ್ಟು ಕಿರುಳುಕುಳ ಕೊಟ್ಟಿದ್ದು ಸಾಕಷ್ಟು ಕಷ್ಟ ಅನುಭವಿಸಿದ್ದೇನೆ.

ನನ್ನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಬೇಕು. ನನಗೆ ನ್ಯಾಯ ಸಿಗಬೇಕು. ಚೇತನ್ ಗೌಡನಿಗಾಗಿ ನನ್ನ ಅರ್ಧ ಜೀವನ ಮುಡುಪಾಗಿಟ್ಟಿದ್ದೆ. ಆದರೆ ಪೂಜಾ ಗೌಡ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ನನಗೆ ಚಿತ್ರಹಿಂಸೆ ಕೊಟ್ಟು ನನ್ನ ಸಾವಿಗೆ ಕಾರಣರಾಗಿದ್ದಾರೆ. ಹೀಗಾಗಿ ಪೂಜಾ ಗೌಡ ಹಾಗೂ ಚೇತನ್ ಗೌಡಗೆ ಶಿಕ್ಷೆಯಾಗಲೇ ಬೇಕು ಎಂದು ಪವಿತ್ರಾ ಡೆತ್‍ನೋಟ್‍ನಲ್ಲಿ ಒತ್ತಾಯಿಸಿದ್ದಾರೆ.

ಮಗಳ ವಾಟ್ಸಾಪ್ ಸ್ಟೇಟಸ್ ನಲ್ಲಿ ಡೆತ್ ನೋಟ್ ನೋಡಿ ತಾಯಿ, ಮಗಳ ಮನೆ ಬಳಿ ಬಂದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸದ್ಯ ಕೆಂಗೇರಿ ಠಾಣೆಯಲ್ಲಿ ಚೇತನ್ ಗೌಡ ಹಾಗೂ ಮತ್ತೊರ್ವ ಯುವತಿ ವಿರುದ್ದ ಎಫ್.ಐ.ಆರ್ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article