ಲೇಖಕ ಡಿ.ಐ.ಅಬೂಕರ್ ಕೈರಂಗಳರಿಗೆ ಹಂಪಿಯಲ್ಲಿ "ನಾಡರತ್ನ" ಪುರಸ್ಕಾರ
ಹೊಸಪೇಟೆ: ಲೇಖಕ, ಸಾಹಿತ್ಯ ಸಾಧಕ ಡಿ. ಐ. ಅಬೂಬಕರ್ ಕೈರಂಗಳ ಅವರಿಗೆ ಹಂಪಿಯಲ್ಲಿ ನಡೆದ ಅಖಿಲ ಭಾರತ 3ನೇ ಗುರುಕುಲ ಕಲಾ ಸಮ್ಮೇಳನದಲ್ಲಿ "ನಾಡರತ್ನ ಪುರಸ್ಕಾರ"ವನ್ನು ನೀಡಿ ಸನ್ಮಾನಿಸಲಾಯಿತು.
ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕರಾದ ಡಾ. ಬಿಜಿ ಕನಕೇಶಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನಮಠ ಹಂಪಿ, ಗುರುಕುಲ ಕಲಾ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಹುಲಿಯೂರು ದುರ್ಗ ಲಕ್ಷ್ಮೀ ನಾರಾಯಣ್, ಸ್ಥಾಪಕ ಕಾರ್ಯಾಧ್ಯಕ್ಷ ಡಾ ಶಿವರಾಜೇ ಗೌಡ ಇನ್ನಿತ ಗಣ್ಯರು ಉಪಸ್ಥಿತರಿದ್ದರು. ರಾಜ್ಯದ ಅನೇಕ ಕವಿ, ಸಾಹಿತಿ, ಕಲಾವಿದರು ಭಾಗವಹಿಸಿದ್ದರು.
ಡಿ.ಐ. ಅಬೂಬಕರ್ ಕೈರಂಗಳರಿಗೆ ಅಭಿನಂದನೆ...
ರಾಜ್ಯದಲ್ಲಿ ಮನೆಮಾತಾಗಿರುವ ತಮ್ಮ " ಶುಭಮುಂಜಾನೆ" ಚುಟುಕು ಸಾಹಿತ್ಯ 500 ರ ಗಡಿ ಮುಟ್ಟಿದ ಸಂದರ್ಭದಲ್ಲಿ ಪ್ರತಿಷ್ಠಿತ PDNA anti corruption Organisation ( ಭ್ರಷ್ಟಾಚಾರ ನಿಗ್ರಹ ದಳ ಸಂಸ್ಥೆ) ಯ ಆಶ್ರಯದಲ್ಲಿ ನವೆಂಬರ್ 16 ರಂದು ನಾಗಮಂಗಲದಲ್ಲಿ ಸನ್ಮಾನಿತರಾಗಿದ್ದು, ಅದೇ ಪ್ರಕಾರ ತಮ್ಮ ನಾಡುನುಡಿ ಸೇವೆಯನ್ನು ಪರಿಗಣಿಸಿ ಗುರುಕುಲ ಕಲಾ ಪ್ರತಿಷ್ಠಾನವು " ನಾಡರತ್ನ " ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ್ದು ಇದೇ ನವೆಂಬರ್ 18 ರಂದು ಹಂಪಿಯಲ್ಲಿ ಸನ್ಮಾನಿತರಾಗಿದ್ದು, ಎರಡೇ ದಿನಗಳ ಅಂತರದಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿ, ಸನ್ಮಾನವನ್ನು ಪಡೆದಿರುವುದಕ್ಕೆ ಆಲ್ವಿನ್ ಡಿ. ಸೋಜಾ ದೇರಳಕಟ್ಟೆ, ಉಬೈದ್ ವಿಟ್ಲ, ಮಾನಸ ಕೈಂತಜೆ, ಯು. ಆರ್. ಶೆಟ್ಟಿ ಪಡೀಲ್ ಮಂಗಳೂರು ಅಭಿನಂದಿಸಿದ್ದಾರೆ.