ನೇಜಾರು ನಾಲ್ವರ ಹತ್ಯೆಯಾ ಪ್ರಕರಣ: ಐನಾಝ್‌ಳ ಮನೆಯನ್ನು ಆರೋಪಿ ಪ್ರವೀಣ್ ಕಂಡು ಹಿಡಿದಿದ್ದು ಹೀಗೆ....

ನೇಜಾರು ನಾಲ್ವರ ಹತ್ಯೆಯಾ ಪ್ರಕರಣ: ಐನಾಝ್‌ಳ ಮನೆಯನ್ನು ಆರೋಪಿ ಪ್ರವೀಣ್ ಕಂಡು ಹಿಡಿದಿದ್ದು ಹೀಗೆ....

ಉಡುಪಿ: ಇಲ್ಲಿನ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಯ ಹಿನ್ನೆಲೆ ಹಾಗು ಕ್ರಿಮಿನಲ್ ಚಟುವಟಿಕೆಯ ಬಗ್ಗೆ ತೀವ್ರ ತನಿಖೆ ನಡೆಸುತ್ತಿರುವ ಪೊಲೀಸರು, ಏರ್ ಇಂಡಿಯಾ ವಿಮಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆತನ ಸಹೋದ್ಯೋಗಿ ಐನಾಝ್‌ಳನ್ನು ಹತ್ಯೆ ಮಾಡಲು ಆಕೆಯ ಮನೆಯನ್ನು ಹುಡುಕಲು ಮಾಡಿದ್ದ ಮಾಸ್ಟರ್ ಪ್ಲಾನ್'ನ್ನು ಪತ್ತೆ ಹಚ್ಚಿದ್ದಾರೆ. 

ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಐನಾಝ್‌ಳಿಗೆ ಪದೇ ಪದೇ ಕಿರುಕುಳ ನೀಡಿತ್ತಿದ್ದ ಆರೋಪಿ ಪ್ರವೀಣ್ ಚೌಗುಲೆಗೆ ಇನ್ನು ಮುಂದೆ ತನಗೆ ಆಕೆ ಸಿಗಲ್ಲ ಎಂಬುದನ್ನು ಅರಿತು ಹತ್ಯೆಗೆ ಪ್ಲಾನ್ ರೂಪಿಸಿ, ಅದರಂತೆಯೇ ಐನಾಝ್‌ಳ ಮನೆಯ ದಾರಿಯನ್ನು ‘ಸ್ನ್ಯಾಪ್ ಚಾಟ್’ ಮೂಲಕ ಕಂಡುಕೊಂಡಿದ್ದ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಹತ್ಯೆಯ ಹಿಂದಿನ ದಿನ ಅಂದರೆ ನ.11ರಂದು ಶನಿವಾರ ಐನಾಝ್ ಅಬುಧಾಬಿಯಿಂದ ಕರ್ತವ್ಯ ಮುಗಿಸಿ ಮಂಗಳೂರಿನಿಂದ ಸೀದಾ ನೇಜಾರಿಗೆ ಬಂದಿರುವುದನ್ನು ಅರಿತ ಚೌಗುಲೆ, ನ.12ರ ರವಿವಾರ ಬೆಳಗ್ಗೆ ಆಕೆ ಹೊರಡುವ ಮೊದಲು ಆಕೆಯನ್ನು ಹತ್ಯೆ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದ. ಅದರಂತೆಯೇ ನೇಜಾರಿಗೆ ರಿಕ್ಷಾ ಮೂಲಕ ಬಂದಿಳಿದ ಆರೋಪಿ, ಮನೆಯ ಬಗ್ಗೆ ಗೊತ್ತಿಲ್ಲದ ಕಾರಣ ಸ್ನ್ಯಾಪ್‌ಚಾಟ್ ಆ್ಯಪ್ ಮೂಲಕ ದಾರಿ ಪತ್ತೆಹಚ್ಚಿದ್ದ. ಆ್ಯಪ್ ಸೂಚಿಸಿದ ದಾರಿ ಮೂಲಕವೇ ಬಂದು ಐನಾಝ್ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಈ ಮಧ್ಯೆ ರಿಕ್ಷಾ ಚಾಲಕ ದಾರಿ ತಪ್ಪಿ ಮುಂದೆ ಹೋಗುತ್ತಿದ್ದಂತೆಯೇ ಸ್ನ್ಯಾಪ್‌ಚಾಟ್ ನೋಡಿ ಮನೆಯ ದಾರಿಯನ್ನು ಚಾಲಕನಿಗೆ ತೋರಿಸಿ, ಅಲ್ಲಿಂದ ತನ್ನ ಕೃತ್ಯ ಮುಗಿಸಿದ್ದಾನೆ ಎಂಬುದನ್ನು ಪೊಲೀಸ್ ಮೂಲಗಳು ತಿಳಿಸಿವೆ. 

ಐನಾಝ್ ಮನೆಗೆ ಎಂಟ್ರಿ ಕೊಟ್ಟ 15 ನಿಮಿಷಗಳೊಳಗೆ ಐನಾಝ್(21), ಆಕೆಯ ತಾಯಿ ಹಸೀನಾ (51), ಸಹೋದರಿ ಅಫ್ನಾನ್‌(23) ಹಾಗು ಸಹೋದರ ಆಸೀಮ್‌ (13) ಸೇರಿದಂತೆ 4 ಮಂದಿಯನ್ನು ಚೂರಿಯಿಂದ  ಹತ್ಯೆ ಮಾಡಿ ಆರೋಪಿ ಪ್ರವೀಣ್ ಚೌಗುಲೆ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  

Ads on article

Advertise in articles 1

advertising articles 2

Advertise under the article