ಹಿರಿಯಡ್ಕ: ಕರಾಟೆ ಸ್ಪರ್ಧೆಯಲ್ಲಿ 7 ಪದಕ ಗೆದ್ದುಕೊಂಡ ಶಿರ್ವ ಫೈಝುಲ್ ಇಸ್ಲಾಂ ಸ್ಕೂಲ್ ವಿದ್ಯಾರ್ಥಿಗಳು
Saturday, December 16, 2023
ಶಿರ್ವ: ಹಿರಿಯಡ್ಕದಲ್ಲಿ ಇತ್ತೀಚೆಗೆ ನಡೆದ ಕರಾಟೆ ಸ್ಪರ್ಧೆಯಲ್ಲಿ ಶಿರ್ವದ ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಒಟ್ಟು ಏಳು ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಜಬ್ಬಾರ್ ಶೇಖ್ ಮತ್ತು ಮುಝೈನ್ ಎ.ಖಾದರ್ ಬೆಳ್ಳಿ ಪದಕ ಮತ್ತು ಅಫಾಕ್ ಅಬ್ಬಾಸ್, ಸಿಯಾನ್, ಮುಬಾಶಿರ್, ಅಯಿಮನ್ ಅಬ್ದುಲ್ ಖಾದರ್, ರುಮಾನ್ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಇವರು ಜಪಾನ್ ಶೋಡೊಕಾನ್ ಕರಾಟೆ ಕನ್ನಿಂಜುಕು ಆರ್ಗನೈಝೇಶನ್ ಇಂಡಿಯಾ ಇದರ ಕರ್ನಾಟಕ ರಾಜ್ಯದ ಮುಖ್ಯ ಶಿಕ್ಷಕ ಮತ್ತು ಪರೀಕ್ಷಕ ಶಂಶುದ್ದೀನ್ ಎಚ್.ಶೇಖ್ ಅವರಿಂದ ತರಬೇತಿ ಪಡೆದಿದ್ದಾರೆ.