ಇನಾಯತ್ ಅಲಿಯೊಂದಿಗೆ ಸುಮಧುರ ಕ್ಷಣಗಳು...

ಇನಾಯತ್ ಅಲಿಯೊಂದಿಗೆ ಸುಮಧುರ ಕ್ಷಣಗಳು...

ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಇನಾಯತ್ ಅಲಿಯೊಂದಿಗೆ ಮಂಗಳೂರಲ್ಲಿ ಮಂಗಳವಾರ ಸಂಜೆ ಜೊತೆಗೂಡಿದ ರಸನಿಮಿಷಗಳು ಅಮೋಘ. ಮಂಗಳವಾರ ಅವರ 43ನೆಯ ಹುಟ್ಟು ಹಬ್ಬ. 

ಹುಟ್ಟುಹಬ್ಬವನ್ನು  ಹಲವಾರು ಜನಹಿತ ಕಾರ್ಯಗಳ ಮೂಲಕ ಹಮ್ಮಿಕೊಂಡಿದ್ದರು. ಮಂಗಳೂರಿನ ಜಿಲ್ಲಾ ಸರಕಾರೀ ಆಸ್ಪತ್ರೆ ವೆನ್ಲಾಕ್  ನಲ್ಲಿ ರೋಗಿಗಳ ಜೊತೆಗಾರರಿಗೆ ಊಟ ಕೊಡುತ್ತಾ ಬರುತ್ತಿರುವುದು ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಆರು ವರ್ಷ ಪೂರ್ಣಗೊಳಿಸಿ ಏಳನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಒಂದು ನಿರಂತರ ಸೇವೆಯಾಗಿದೆ‌ . ಹೀಗೆ ಈ  ಸೇವೆಯನ್ನು  ಸತತವಾಗಿ ನಡೆಸಿಕೊಂಡು ಬರುತ್ತಿರುವ ಎಂ‌. ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ನ ಸ್ಥಾಪಕ ಕಾರ್ಯದರ್ಶಿ ಎಂ. ರಶೀದ್ ವಿಟ್ಲ ಕೂಡಾ ಈ ಸಮಾರಂಭದಲ್ಲಿದ್ದರು. ಎಂ. ಫ್ರೆಂಡ್ಸ್ ನೀಡುತ್ತಿರುವ   ಇಂದಿನ ಊಟದ ವೆಚ್ಚದ ಪ್ರಾಯೋಜಕತ್ವವನ್ನು ತನ್ನ ಹುಟ್ಟುಹಬ್ಬದ ಅಂಗವಾಗಿ  ಇನಾಯತ್ ಅಲಿಯವರು ವಹಿಸಿಕೊಂಡಿದ್ದರು. ಆದ್ದರಿಂದ ಎಂ‌. ಫ್ರೆಂಡ್ಸ್ ನ ಇಂದಿನ ಅನ್ನದಾನಕ್ಕೆ  ಇನಾಯತ್ ಅಲಿಯವರ ಅಭಿಮಾನಿಗಳು ಒಂದು ಸಮಾರಂಭದ ರೂಪ ಕೊಟ್ಟು ಇನಾಯತ್ ಅಲಿಯವರನ್ನೂ ಇತರ ಕೆಲವು ಗಣ್ಯರನ್ನೂ ಆಹ್ವಾನಿಸಿದ್ದರು.

ತುಂಬಾ ವರ್ಷಗಳ ಆತ್ಮೀಯ ಗೆಳೆಯ, ಕಳೆದ ಮೌಲಿದ್ ತಿಂಗಳಲ್ಲಿ ನನ್ನ ಮನೆಯಲ್ಲಿ ನಡೆದ ಮೌಲಿದ್ ಸಮಾರಂಭಕ್ಕೆ ತುಂಬಾ ಕಾರ್ಯದೊತ್ತಡವಿದ್ದರೂ ನನ್ನ ಮೇಲೆ ಪ್ರೀತಿಯಿಟ್ಟು ನನ್ನ ಮನೆಗೆ ಬಂದಂತಹ ಸಹೃದಯಿ ಇನಾಯತ್ ಅಲಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವ ಈ ಸಮಾರಂಭದ ವಿಷಯ ಅರಿತ ಕೂಡಲೇ  ನಾನೂ ಮಂಗಳೂರಿಗೆ ಧಾವಿಸಿದ್ದೆ.  ನನ್ನನ್ನು ಕಂಡ ಕೂಡಲೇ ಆತ್ಮೀಯತೆಯಿಂದ   ಇನಾಯತ್ ಅಲಿ ನನ್ನ ತಬ್ಬಿಕೊಂಡು ಸಂತೋಷ ವ್ಯಕ್ತಪಡಿಸಿದರು. ನನ್ನ ಮೇಲೆ ಪ್ರೀತಿಯಿಟ್ಟು ಬಂದಿರಲ್ಲ, ಈ ಪ್ರೀತಿ ವಿಸ್ವಾಸ ನಿರಂತರ ಇರಲಿ ಎಂದಾಗ ನಾನು ಭಾವುಕನಾಗಿದ್ದೆ. 

  ಇನಾಯತ್ ಅಲಿ ಇದೀಗ ರೂಲಿಂಗ್ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಎಂಬ ಉನ್ನತ ಸ್ಥಾನದಲ್ಲಿದ್ದಾರೆ.  ಆದರೂ ಅದರ ತಲೆಭಾರವಿಲ್ಲದೆ ಅವರ ಸಹಜ, ನಿಸ್ಪೃಹ ಒಡನಾಟವು ಅವರ ವ್ಯಕ್ತಿಕ್ತದ ಮಾಧುರ್ಯಕೊಂದು ಮೆರುಗು. 

ನನ್ನ ಆಪ್ತ  ಮಿತ್ರ ಇನಾಯತ್ ಅಲಿ ಇನ್ನೂ  ಬೆಳೆಯಲಿ,  ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂಬುದು ನನ್ನ ಮನದಾಳದ ಹಾರೈಕೆ. 

ಹಲವಾರು ಜೀವ ಕಾರುಣ್ಯದ ಜೊತೆಗೆ ವೆನ್ಲಾಕ್ ಆಸ್ಪತ್ರೆಯ ರೋಗಿಗಳ ಆಪ್ತರಿಗೆ ಊಟ ನೀಡುವ ಕಾರ್ಯವನ್ನು ಸತತವಾಗಿ ಏಳು ವರ್ಷದ ವರೆಗೆ ಒಂದು ದಿನ ಕೂಡಾ ಬಾಕಿ ಇಲ್ಲದೆ ನಿರ್ವಹಿಸುತ್ತಾ ಬರುವುದೆಂದರೆ ಅದು ಸಾಮಾನ್ಯ ಸೇವೆಯಲ್ಲ. ಇಂತಹ ಹಲವಾರು ಸೇವೆಗಳ ಮೂಲಕ ಅದೆಷ್ಟೋ ಜನರಿಗೆ ಮಹದುಪಕಾರ ಮಾಡುತ್ತಾ ಬರುತ್ತಿರುವ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.

- ಡಿ. ಐ. ಅಬೂಬಕರ್ ಕೈರಂಗಳ

Ads on article

Advertise in articles 1

advertising articles 2

Advertise under the article