ಕುವೈತ್ ಮಣಿಪುರ ಮುಸ್ಲಿಂ ಅಸೋಸಿಯೇಶನ್ ಮಹಾಸಭೆ; ಅಧ್ಯಕ್ಷರಾಗಿ ಜುಬೇರ್ ಶಾಬಾನ್, ಪ್ರ.ಕಾರ್ಯದರ್ಶಿ ಇಬ್ರಾಹಿಂ CH, ಕೋಶಾಧಿಕಾರಿಯಾಗಿ ಜಮಾಲ್ ಮಣಿಪುರ ಆಯ್ಕೆ

ಕುವೈತ್ ಮಣಿಪುರ ಮುಸ್ಲಿಂ ಅಸೋಸಿಯೇಶನ್ ಮಹಾಸಭೆ; ಅಧ್ಯಕ್ಷರಾಗಿ ಜುಬೇರ್ ಶಾಬಾನ್, ಪ್ರ.ಕಾರ್ಯದರ್ಶಿ ಇಬ್ರಾಹಿಂ CH, ಕೋಶಾಧಿಕಾರಿಯಾಗಿ ಜಮಾಲ್ ಮಣಿಪುರ ಆಯ್ಕೆ

ಕುವೈತ್: ಕುವೈತ್ ಮಣಿಪುರ ಮುಸ್ಲಿಂ ಅಸೋಸಿಯೇಶನ್ ಇದರ 20 ನೇ ವರ್ಷದ ಹಾಗೂ 2023ರ ವಾರ್ಷಿಕ ಮಹಾಸಭೆಯ ಕಾರ್ಯಕ್ರಮವು ಸಂಘದ ಸ್ಥಾಪಕ ಗೌರವಾಧ್ಯಕ್ಷರಾದ ಸೈಯದ್ ಅಹಮದ್ ಅವರ ಸಭಾ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಾಲ್ಮಿಯ ಸುನ್ನೀ ಸೆಂಟರ್ ನಲ್ಲಿ ನಡೆಯಿತು.








ಪ್ರಸ್ತುತ ಕಾರ್ಯಕ್ರಮದಲ್ಲಿ ಮಾಸ್ಟರ್ ಸಾಬಿಕ್ ರವರು ಕಿರಾಅತ್ ಪಠಿಸಿ ಚಾಲನೆಯನ್ನು ನೀಡಿದರು.

ವೇದಿಕೆ ಯಲ್ಲಿ ಆಸೀನರಾದ ಗಣ್ಯರಿಗೆ ಹೂ ಗೊಚ್ಚೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿರುವ ಗಣ್ಯ ಅತಿಥಿಗಳನ್ನು  ಖಜಾಂಜಿ ಇಬ್ರಾಹಿಂ CH ಸಂಘದ ಪರವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ಲೆಕ್ಕ ಪರಿಶೋಧಕ ಜುಬೇರ್ ಶಾಬಾನ್ ರವರು ನೆರವೇರಿಸಿದರು.

2023 ರ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಉಚ್ಚಿಲ ರವರು ಮಂಡಿಸಿದರು. ಸಂಘದ ಅಧ್ಯಕ್ಷರಾದ ಜಮಾಲ್ ಮಣಿಪುರ ಸಂಘದ ಪರವಾಗಿ ಮಾತುಗಳನ್ನಾಡಿಸಿದರು.

ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಗಳಾಗಿ ಅಬ್ದುಲ್ ಜಬ್ಬಾರ್ KKMA ಮಾಜಿ ಅಧ್ಯಕ್ಷರು ಕರ್ನಾಟಕ ಬ್ರಾಂಚ್, ಶಫೀಕ್ ಅಹ್ಸನಿ ಇಮಾಮ್ ಜಹರ ಮಸ್ಜಿದ್, ಮುಸ್ತಫ ಮದನಿ ಖತೀಬ್ ಮಿನಿಸ್ಟ್ರಿ ಆಫ್ ಅವುಕಾಫ್, ಯೂಸುಫ್ ರಾಶಿದ್ ಅಧ್ಯಕ್ಷರು KKMA ಕರ್ನಾಟಕ ಬ್ರಾಂಚ್, ಯೂಸುಫ್ ಮಂಚಕಲ್ ಅಧ್ಯಕ್ಷರು DKSC ಕುವೈತ್, ಸೈಯದ್ ರಫೀಕ್ ಮುಲ್ಕಿ KKMA ಖಜಾಂಜಿ ಸೆಂಟ್ರಲ್ ಕಮಿಟಿ, ಇಕ್ಬಾಲ್ ಉಪಾಧ್ಯಕ್ಷರು KKMA ಸೆಂಟ್ರಲ್ ಕಮಿಟಿ, ಹುಸೈನ್ ಎರ್ಮಾಡ್ ಅಧ್ಯಕ್ಷರು ಕೆಸಿಎಫ್ ಕುವೈತ್ ಉಪಸ್ಥಿತರಿದ್ದರು.

ಸಂಘದ ಸ್ಥಾಪನೆಗೆ ಶ್ರಮಿಸಿದ ಸ್ಥಾಪಕ ಸದಸ್ಯರಾದ ಜುಬೇರ್ ಶಾಬಾನ್ ರವರಿಗೆ ಹಾಗೂ ಸಂಘಕ್ಕಾಗಿ ಉತ್ತಮ ಕಾರ್ಯನಿರ್ವಹಿಸಿದ ಫತಾವುಲ್ಲ, ಇಸ್ಮಾಯಿಲ್, ಉಬೈದುಲ್ಲ ಮತ್ತು ಕುವೈಟ್'ನಲ್ಲಿ ನೆಲೆಸಿರುವ ಭಾರತೀಯ ಅನಿವಾಸಿಗಳ ಎಲ್ಲಾ ರೀತಿಯ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸಿ ಸಹಕರಿಸುತ್ತಿದ್ದ ಲತೀಫ್ ರವರನ್ನೂ ಕೂಡ ಈ ಸಂದರ್ಭದಲ್ಲಿ  ಗೌರವ ಫಲಕ ನೀಡಿ ಗೌರವಿಸಲಾಯಿತು.

20 ವರ್ಷದಿಂದ ಸ್ಥಾಪಕ ಗೌರವಾಧ್ಯಕ್ಷರಾದ ಸೈಯದ್ ಅಹಮದ್ ರವರ ಕುರಿತು ಸಂಘದ ಉಪಾಧ್ಯಕ್ಷರಾದ ಕರೀಂ ಬಿರಾಲಿ ಉಚ್ಚಿಲರವರು ತಮ್ಮ ಅನಿಸಿಕೆಯನ್ನು ಹೇಳಿ ಅವರಿಗೆ ಸಂಘದ ವತಿಯಿಂದ ಶಾಲು ಹೊದಿಸಿ ಫಲಕವನ್ನು ನೀಡಿ ಗೌರವಿಸಿದರು.

ಇದೇ ಸಂದರ್ಭದಲ್ಲಿ 2024ರ ನೂತನ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಸೈಯದ್ ಅಹಮದ್, ಅಧ್ಯಕ್ಷರಾಗಿ ಜುಬೇರ್ ಶಾಬಾನ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ CH, ಕೋಶಾಧಿಕಾರಿ ಜಮಾಲ್ ಮಣಿಪುರ  ಹಾಗೂ 13 ಇತರ ಸದಸ್ಯರನ್ನಾಗಿ ನೇಮಿಸಲಾಯಿತು.

ಲತೀಫ್ ಹಾಗೂ ಯೂಸುಫ್ ಮುನಿಯಮ್ ರವರು ಸಂಘದ ಬಗ್ಗೆ ಸಭಿಕರ ಪರವಾಗಿ ಮಾತನಾಡಿದರು.

ಸಭಾ ಕಾರ್ಯಕ್ರಮದ ಕೊನೆಯದಾಗಿ ಸ್ಥಾಪಕ ಗೌರವಾಧ್ಯಕ್ಷರಾದ ಸೈಯದ್ ಅಹಮದ್ ಅವರು ತಮ್ಮ ಸಂಘಕ್ಕೆ ನೀಡುವಂತಹ ಸಾಂತ್ವನದ ಕುರಿತು ಸವಿಸ್ತಾರವಾಗಿ ವಿವರಿಸಿದರು. ಹುಸೈನ್ ಎರ್ಮಾಡ್ ಉಸ್ತಾದ್ ರವರು ದುವಾ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆ ಹೈದರ್ ಉಚ್ಚಿಲ ರವರು ನಿರ್ವಹಿಸಿದರು.

ಸಂಘದ ಸದಸ್ಯರಾದ ಸೌಕತ್ ಶಿರ್ವ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಸಂಘದ ಪರವಾಗಿ ಧನ್ಯವಾದ ಗೈದರು.

Ads on article

Advertise in articles 1

advertising articles 2

Advertise under the article