ದುಬೈನಲ್ಲಿ ಯಶಸ್ವಿಯಾಗಿ ನಡೆದ 'ಒಕ್ಕಲಿಗ ಕುಟುಂಬಗಳ ಸಮಾಗಮ'
Tuesday, February 27, 2024
ಮರುಭೂಮಿಯ ನಾಡು ದುಬೈನಲ್ಲಿ ಒಕ್ಕಲಿಗ ಸಮುದಾಯವನ್ನು ಒಗ್ಗೂಡಿಸಿ, ಏಳಿಗೆಗೆ ಶ್ರಮಿಸುತ್ತಿರುವ ಒಕ್ಕಲಿಗ ಸಂಘ ಯುಎಇ, ಇವರ ವತಿಯಿಂದ ಫೆಬ್ರವರಿ 25ರಂದು 'ಒಕ್ಕಲಿಗ ಕುಟುಂಬಗಳ ಸಮಾಗಮ' ಕಾರ್ಯಕ್ರಮ ದುಬೈನ ಮಮ್ಜಾರ್ ಪಾರ್ಕ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ಒಕ್ಕಲಿಗ ಸಂಘ ಯುಎಇ ಅಧ್ಯಕ್ಷರಾದ ಶ್ರೀ ಕಿರಣ್ ಗೌಡ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚಿನ ಒಕ್ಕಲಿಗ ಬಂಧುಗಳು ಕುಟುಂಬ ಸಮೇತರಾಗಿ ಪಾಲ್ಗೊಂಡು ವಿವಿಧ ಮನೋರಂಜನಾ, ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಭ್ರಮಿಸಿದರು.
ಒಕ್ಕಲಿಗ ಸಂಘ ಯುಎಇಯ ಅಧ್ಯಕ್ಷರಾಗಿರುವ ಕಿರಣ್ ಗೌಡರವರು, ಹೊಸದಾಗಿ ಆಯ್ಕೆಯಾದ ಸಮಿತಿಯ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸುತ್ತಾ, ಅನಿವಾಸಿಗಳಾಗಿರುವ ಒಕ್ಕಲಿಗ ಸಮುದಾಯದ ಉದ್ಯಮ ಅಭಿವೃದ್ಧಿ, ಹೊಸಬರಿಗೆ ಉದ್ಯೋಗವಕಾಶ ಕಲ್ಪಿಸಲು ಸಹಾಯಹಸ್ತ ಯೋಜನೆಗಳು, ಸಮುದಾಯದ ಸಂಸ್ಕೃತಿ, ಆಚರಣೆಗಳ ಕಂಪನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಸರಿಸುವ ವೇದಿಕೆ ನಿರ್ಮಾಣ, ಹೀಗೆ ಹಲವು ಕಾರ್ಯಕ್ರಮಗಳನ್ನು ಕಾರ್ಯ ರೂಪಕ್ಕೆ ತರಲು ಒಗ್ಗಟ್ಟಾಗಿ ಶ್ರಮಿಸಲು ಕರೆಕೊಟ್ಟರು.
ಮಮ್ಜಾರ್ ಪಾರ್ಕ್ ನಲ್ಲೇ ಸಾಂಪ್ರದಾಯಿಕ ಬಾಡೂಟವನ್ನು ಸದಸ್ಯರೆಲ್ಲರೂ ಸೇರಿ ತಯಾರಿಸಿ ಸಂತೋಷವಾಗಿ ಹಂಚಿ ತಿಂದು, ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ಮಕ್ಕಳಿಗೆ ಹಿರಿಯರಿಗೆ ಬಹುಮಾನ ವಿತರಿಸಿ, ಶೀಘ್ರದಲ್ಲೇ ಮತ್ತೊಮ್ಮೆ ಒಗ್ಗೂಡುವ ಎಂದು ಒಕ್ಕೊರಲಿನಿಂದ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೋರ್ ಕಮಿಟಿ ಸದಸ್ಯರಾದ ಹರೀಶ್ ಕೋಡಿ, ವರದರಾಜ್ ಕೆ.ಸಿ, ಸುರೇಶ್ ಬಾಬು ಕೆ.ಪಿ, ಪ್ರಸಿದ್ಧ್ ಗೌಡ, ಪ್ರದೀಪ್ ಗೌಡ, ಕಿರಣ್ ಕುಮಾರ್, ಮಂಜುನಾಥ ಆರ್ ಕೃಷ್ಣ, ಗಿರೀಶ್, ಹರೀಶ್ ಗೌಡ, ಸುನೀಲ್ ಮೊಟ್ಟೆಮನೆ, ಬಸವರಾಜ, ಶರತ್ ಚೊಕ್ಕಾಡಿ, ಬಸವರಾಜು ಎನ್. ಗೌಡ, ನವೀನ್ ಗೌಡ, ಶಿವಪ್ರಕಾಶ್ ಗೌಡ, ಸುರೇಶ್ ಕುಂಪಲ ಉಪಸ್ಥಿತರಿದ್ದರು.
ಆಹ್ವಾನ: ಮಾರ್ಚ್ 3ರಂದು ಹೋಳಿ ಆಚರಣೆ
ಒಕ್ಕಲಿಗ ಸಂಘ ಯುಎಇ ವತಿಯಿಂದ ರಂಗು ರಂಗಿನ ಹೋಳಿ ಹಬ್ಬ ನಡೆಸಲು ನಿರ್ಧರಿಸಲಾಯಿತು. ಮಮ್ಜಾರ್ ಪಾರ್ಕ್ ನಲ್ಲಿ ಹಲವು ಅಂತಾರಾಷ್ಟ್ರೀಯ ಕಲಾವಿದರೊಂದಿಗೆ ವಿವಿಧ ರೀತಿಯ ಸಂಭ್ರಮದ ಅದ್ದೂರಿಯ ಹೋಳಿ ಆಚರಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 0544229227/ 0585689922 ಸಂಪರ್ಕಿಸಿ.