
ಹೆಮ್ಮೆಯ ದುಬೈ ಕನ್ನಡಿಗರ ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ
ಅಬುಧಾಬಿ: ಸಂಯುಕ್ತ ಅರಬ್ ಸಂಸ್ಥಾನದ ವಿವಿಧ ಭಾಗಗಳಲ್ಲಿರುವ ಕನ್ನಡಿಗರು ತಮ್ಮ ಕುಟುಂಬ ಸದಸ್ಯರೊಂದಿಗೆ ಮಾರ್ಚ್ 3ರಂದು ದುಬೈ ಮತ್ತು ಶಾರ್ಜಾದಿಂದ ಅರಬ್ ಸಂಸ್ಥಾನದ ಉತ್ತರ ಭಾಗವಾದ ಫುಜೇರ ಕಡೆ ಒಂದು ದಿನದ ಬಸ್ ಪ್ರವಾಸವನ್ನು ಮಾಡಿದರು. ದಾರಿಯುದ್ದಕ್ಕೂ ಕಲ್ಲಿನ ಬೆಟ್ಟಗಳು ಮತ್ತು ಇತರ ಪ್ರವಾಸಿ ತಾಣಗಳನ್ನು ಸಂದರ್ಶಿಸಿದರು, ಫುಜೆರಾ ಬೀಚ್ ಬಳಿ ಇರುವ ಪಾರ್ಕಿನಲ್ಲಿ ಮದ್ಯಾಹ್ನದ ಭೋಜನವನ್ನು ಸೇವಿಸಿ ಅಲ್ಲೇ ವಿವಿಧ ರೀತಿಯ ಮೋಜಿನ ಆಟವಾಡಿದರು.
ಬಸ್ ಪ್ರವಾಸದ ವೇಳೆ ವಿಶ್ವ ಮಹಿಳಾ ದಿನಾಚರಣೆಯನ್ನು ಬಸ್ ಪ್ರವಾಸದಲ್ಲಿ ಆಗಮಿಸಿದ್ದ ಕನ್ನಡತಿಯರು ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಿದರು, ಪ್ರವಾಸವನ್ನು ಹೆಮ್ಮೆಯ ದುಬೈ ಕನ್ನಡ ಸಂಘ ಕಳೆದ ನಾಲ್ಕು ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿದ್ದು ಪ್ರವಾಸದ ವೇಳೆ ಹೆಮ್ಮೆಯ ದುಬೈ ಕನ್ನಡ ಸಂಘದ ಅಧ್ಯಕ್ಷರಾದ ಹಾದಿಯ ಮಂಡ್ಯ, ಮಾಜಿ ಅಧ್ಯಕ್ಷರಾದ ಮಮತಾ ಮೈಸೂರು, ಸಮಿತಿ ಸದಸ್ಯರುಗಳಾದ ರಫೀಕಲಿ ಕೊಡಗು, ಅಕ್ರಮ್ ಕೊಡಗು, ಮೊಹೀನ್ ಹುಬ್ಬಳ್ಳಿ, ಪ್ರತಾಪ್ ಮಡಿಕೇರಿ, ನಝೀರ ಮಂಡ್ಯ ಮುಂತಾದವರು ಇದ್ದರು.