ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Friday, March 15, 2024
ದುಬೈ: ಮಾರ್ಚ್ 2ರಂದು ಕಾರ್ಲ್ಟನ್ ಹೋಟೆಲ್ ಸಭಾಂಗಣದಲ್ಲಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ಕನ್ನಡಿಗ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂನ್ಸರ್ ಅವಾರ್ಡ್ ಕಾರ್ಯಕ್ರಮ ನಡೆಯಿತು.
ರಾಯಲ್ ವಿಂಕೋ ಇವೆಂಟ್ಸ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರತಿಭಿಯನ್ನು ಪ್ರದರ್ಶಿಸುತ್ತಿರುವ ಅನೇಕ ಕನ್ನಡಿಗ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂನ್ಸೆರ್ಸ್ ಬಂದು ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮದ ಆಯೋಜನೆಯನ್ನು ದುಬೈ ಉದ್ಯಮಿ ಔಸಾಫ್ ಕನ್ನಡಿಗ ಮತ್ತು ದುಬೈ ಅನಿವಾಸಿ ಕನ್ನಡಿಗರ ಪ್ರಮುಖರಾದ ಫಿರೋಜ್ ಅವರು ಬಹಳ ಅಚ್ಚುಕಟ್ಟಾಗಿ ಆಯೋಜಿದ್ದರು, ಈ ಕಾರ್ಯಕ್ರಮಕ್ಕೆ ಯುಎಇ ದೇಶದಲ್ಲಿರುವ ಅನೇಕ ಸಾಮಾಜಿಕ ವ್ಯಾವಹಾರಿಕ ಪ್ರಮುಖರು ಆಗಮಿಸಿದ್ದರು.