ಒಡಿಶಾದ ಗೋಪಾಲ್‌ ಪುರ್‌ ಬಂದರನ್ನು 3,080 ಕೋಟಿ ರೂ.ಗೆ ಖರೀದಿಸಿದ ಅದಾನಿ ಕಂಪನಿ !

ಒಡಿಶಾದ ಗೋಪಾಲ್‌ ಪುರ್‌ ಬಂದರನ್ನು 3,080 ಕೋಟಿ ರೂ.ಗೆ ಖರೀದಿಸಿದ ಅದಾನಿ ಕಂಪನಿ !

ನವದೆಹಲಿ: ಅದಾನಿ ಬಂದರು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್‌ (APSEZ) ಎಸ್‌ ಪಿ ಗ್ರೂಪ್‌ ನ ಶೇ.56ರಷ್ಟು ಷೇರನ್ನು ಖರೀದಿಸಿದ್ದು, ಗೋಪಾಲ್‌ ಪುರ್‌ ಪೋರ್ಟ್‌ ಲಿಮಿಟೆಡ್‌ ನಲ್ಲಿ (ಜಿಪಿಎಲ್) ಒರಿಸ್ಸಾ ಸ್ಟೀವರ್ಡೋರ್ಸ್‌ ಲಿಮಿಟೆಡ್‌ ನ ಶೇ.39 ಪ್ರತಿಶತ ಷೇರನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿರುವುದಾಗಿ ಕಂಪನಿ ಮಂಗಳವಾರ ಇ-ಫೈಲಿಂಗ್‌ ನಲ್ಲಿ ಘೋಷಿಸಿತ್ತು.

ಒಡಿಶಾದ ಗೋಪಾಲ್‌ ಪುರ್‌ ಬಂದರನ್ನು 3,080 ಕೋಟಿ ರೂಪಾಯಿಗೆ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅದಾನಿ ಬಂದರು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್‌ ತಿಳಿಸಿದೆ. ಖರೀದಿಯ ವಹಿವಾಟು ಶಾಸನಬದ್ಧ ಅನುಮೋದನೆ ಮತ್ತು ಇತರ ಷರತ್ತುಗಳಿಗೆ ಒಳಪಟ್ಟಿರುವುದಾಗಿ ಹೇಳಿದೆ.

ಗೋಪಾಲಪುರ್‌ ಬಂದರು ಭಾರತದ ಪೂರ್ವ ಕರಾವಳಿ (ಒಡಿಶಾ) ಪ್ರದೇಶದಲ್ಲಿದೆ. ಇದು ವಾರ್ಷಿಕವಾಗಿ 20ಎಂಎಂಟಿಪಿಯ ಸಾಮರ್ಥ್ಯವನ್ನು ಹೊಂದಿದೆ. ಒಡಿಶಾ ಸರ್ಕಾರ 2006ರಲ್ಲಿ ಜಿಪಿಎಲ್‌ ಗೆ 30 ವರ್ಷಗಳ ರಿಯಾಯ್ತಿ ನೀಡಿದ್ದು, ಬಳಿಕ ತಲಾ 10 ವರ್ಷಗಳ ವಿಸ್ತರಣೆ ನೀಡಿತ್ತು.

ಗೋಪಾಲಪುರ ಬಂದರಿನಿಂದ ಕಬ್ಬಿಣ, ಅದಿರು, ಕಲ್ಲಿದ್ದಲು, ಸುಣ್ಣದ ಕಲ್ಲು, ಇಲ್ಮೆನೈಟ್‌ ಮತ್ತು ಅಲ್ಯುಮಿನಿಯಂ ಸೇರಿದಂತೆ ಬೃಹತ್‌ ಸರಕು, ಸಾಗಾಟ ನಡೆಯುತ್ತದೆ ಎಂದು ವರದಿ ವಿವರಿಸಿದೆ. 

Ads on article

Advertise in articles 1

advertising articles 2

Advertise under the article