ಕಾಂಗ್ರೆಸಿನ 2ನೇ ಪಟ್ಟಿ ಫೈನಲ್; ದಕ್ಷಿಣ ಕನ್ನಡಕ್ಕೆ ಪದ್ಮರಾಜ್‌-ಉಡುಪಿ -ಚಿಕ್ಕಮಗಳೂರಿಗೆ ಜಯಪ್ರಕಾಶ್‌ ಹೆಗ್ಡೆ; ಐವರು ಸಚಿವರ ಮಕ್ಕಳಿಗೆ ಟಿಕೆಟ್ ಫಿಕ್ಸ್

ಕಾಂಗ್ರೆಸಿನ 2ನೇ ಪಟ್ಟಿ ಫೈನಲ್; ದಕ್ಷಿಣ ಕನ್ನಡಕ್ಕೆ ಪದ್ಮರಾಜ್‌-ಉಡುಪಿ -ಚಿಕ್ಕಮಗಳೂರಿಗೆ ಜಯಪ್ರಕಾಶ್‌ ಹೆಗ್ಡೆ; ಐವರು ಸಚಿವರ ಮಕ್ಕಳಿಗೆ ಟಿಕೆಟ್ ಫಿಕ್ಸ್

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ಚುನಾವಣಾ ಸಮಿತಿಯು ಬಾಕಿಯಿದ್ದ 21 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಂತಿಮಗೊಳಿಸಿದೆನ್ನಲಾಗಿದೆ.

ದಕ್ಷಿಣ ಕನ್ನಡಕ್ಕೆ ಪದ್ಮರಾಜ್‌ ಹಾಗು ಉಡುಪಿ -ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್‌ ಹೆಗ್ಡೆ ಅವರನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 21 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಿತು. ಆದರೆ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಈ 4 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ ಎಂದು ತಿಳಿದುಬಂದಿದೆ.

ಎಐಸಿಸಿ ನಾಯಕಿ ಸೋನಿಯಾ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದ ಸಿಇಸಿ ಸಭೆಯಲ್ಲಿ ಒಟ್ಟು 17 ಕ್ಷೇತ್ರಗಳ ಟಿಕೆಟ್‌ ಅಂತಿಮಗೊಳಿಸಲಾಗಿದೆ.

ಈ ಬಾರಿ ಐವರು ಸಚಿವರ ಮಕ್ಕಳಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದ್ದು, ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳಕ್ಕರ್‌ ಪುತ್ರ ಮೃಣಾಲ್‌ಗೆ ಹಾಗೂ ಚಿಕ್ಕೋಡಿಯಿಂದ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾಗೆ ಅವಕಾಶ ನೀಡಲಾಗಿದ್ದು, ಸಚಿವ ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತ ಪಾಟೀಲ್‌ಗೆ ಬಾಗಲಕೋಟೆಯಿಂದ ಟಿಕೆಟ್‌ ನೀಡಲಾಗಿದೆ. ಶಾಮನೂರು ಶಿವಶಂಕರಪ್ಪ ಸೊಸೆ ಪ್ರಭಾ ಮಲ್ಲಿಕಾರ್ಜುನಗೆ ದಾವಣಗೆರೆಯಿಂದ ಹಾಗೂ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿಗೆ ಬೆಂಗಳೂರು ದಕ್ಷಿಣದಿಂದ ಟಿಕೆಟ್‌ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ಅಭ್ಯರ್ಥಿಗಳ ವಿವರ ಈ ರೀತಿ ಇದೆ...

ಚಿತ್ರದುರ್ಗ -ಬಿ.ಎನ್‌.ಚಂದ್ರಪ್ಪ

ಬೆಳಗಾವಿ - ಮೃಣಾಲ್‌ ಹೆಬ್ಬಾಳಕರ್‌

ಚಿಕ್ಕೋಡಿ - ಪ್ರಿಯಾಂಕಾ ಜಾರಕಿಹೊಳಿ

ಬಾಗಲಕೋಟೆ - ಸಂಯುಕ್ತಾ ಪಾಟೀಲ್‌

ಧಾರವಾಡ - ವಿನೋದ್‌ ಅಸುಟಿ

ದಾವಣಗೆರೆ - ಪ್ರಭಾ ಮಲ್ಲಿಕಾರ್ಜುನ

ಕೊಪ್ಪಳ - ರಾಜಶೇಖರ ಹಿಟ್ನಾಳ್‌

ಕಲಬುರಗಿ - ರಾಧಾಕೃಷ್ಣ ದೊಡ್ಡಮನಿ

ಬೀದರ್‌ - ರಾಜಶೇಖರ್‌ ಪಾಟೀಲ್‌

ದಕ್ಷಿಣ ಕನ್ನಡ - ಪದ್ಮರಾಜ್‌

ಉಡುಪಿ -ಚಿಕ್ಕಮಗಳೂರು -ಜಯಪ್ರಕಾಶ್‌ ಹೆಗ್ಡೆ

ಬೆಂಗಳೂರು ದಕ್ಷಿಣ - ಸೌಮ್ಯ ರೆಡ್ಡಿ

ಬೆಂಗಳೂರು ಸೆಂಟ್ರಲ್‌ -ಮನ್ಸೂರ್‌ ಅಲಿಖಾನ್‌

ಬೆಂಗಳೂರು ಉತ್ತರ -ಪ್ರೊ.ರಾಜೀವ್‌ ಗೌಡ

ಮೈಸೂರು -ಎಂ.ಲಕ್ಷ್ಮಣ್‌

ರಾಯಚೂರು -ಜಿ.ಕುಮಾರ ನಾಯಕ್‌

ಉತ್ತರ ಕನ್ನಡ -ಡಾ.ಅಂಜಲಿ ನಿಂಬಾಳ್ಕರ್‌

Ads on article

Advertise in articles 1

advertising articles 2

Advertise under the article