ದುಬೈ; ಕನ್ನಡತಿ ಮಮತಾ ಕುಟುಂಬದಿಂದ ಹೆಮ್ಮೆಯ ದುಬೈ ಕನ್ನಡ ಸಂಘದ ಸದಸ್ಯರಿಗೆ ಇಫ್ತಾರ್ ಕೂಟ
Thursday, March 28, 2024
ದುಬೈ: ಪವಿತ್ರ ರಂಜಾನ್ ತಿಂಗಳಲ್ಲಿ ಉಪವಾಸ ವೃತಾನುಷ್ಠಾನ ಪ್ರಯುಕ್ತ ಹೆಮ್ಮೆಯ ದುಬೈ ಕನ್ನಡ ಸಂಘದ ಸಮಿತಿ ಸದಸ್ಯರಿಗೆ ಮತ್ತು ಅವರ ಕುಟುಂಬದವರಿಗೆ ಹೆಮ್ಮೆಯ ದುಬೈ ಕನ್ನಡ ಸಂಘದ ಮಾಜಿ ಅಧ್ಯಕ್ಷ ಮಮತಾ ರಾಘವೇಂದ್ರ ಮೈಸೂರು ಕುಟುಂಬದ ವತಿಯಿಂದ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.
ಮಾರ್ಚ್ 24ರಂದು ಅಲ್ ಕ್ವಾಸಿನಲ್ಲಿರುವ ಎಮಿರೇಟ್ಸ್ ಹೋಟೆಲಿನಲ್ಲಿ ಆಯೋಜಿಸಿದ್ದರು, ತಂಡದ ಬಹುತೇಕ ಸದಸ್ಯರು ತಮ್ಮ ಕುಟುಂಬದೊಂದಿಗೆ ಪಾಲ್ಗೊಂಡು ಸಂತಸಪಟ್ಟರು, ಇಫ್ತಾರ್ ಆಯೋಜನೆ ಮಾಡಿದ ಮಮತಾ ಕುಟುಂಬಕ್ಕೆ ರಫೀಕಲಿ ಅವರು ಧನ್ಯವಾದಗಳನ್ನು ತಿಳಿಸಿದರು. ಈ ಕುಟುಂಬವು ಕಳೆದ ಮೂರು ವರ್ಷಗಳಿಂದ ಇಫ್ತಾರ್ ಕೂಟವನ್ನು ಆಯೋಜಿಸಕೊಂಡು ಬರುತ್ತಿದ್ದು ಶ್ಲಾಘನೀಯ ವಿಷಯ ಎಂದು ಆಗಮಿಸದವರು ತಿಳಿಸಿದರು.