ಕುವೈಟ್ ಮಣಿಪುರ ಮುಸ್ಲಿಂ ಅಸೋಸಿಯೇಶನ್ ವತಿಯಿಂದ ರಮದಾನ್ ಕಿಟ್ ವಿತರಣೆ
Saturday, March 9, 2024
ಕಟಪಾಡಿ: ಕುವೈಟ್ ಮಣಿಪುರ ಮುಸ್ಲಿಂ ಅಸೋಸಿಯೇಶನ್ ಕುವೈಟ್ ಸಂಸ್ಥೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ರಮದಾನ್ ಕಿಟ್ ವಿತರಿಸಲಾಯಿತು.
ಸರಿ ಸುಮಾರು 20 ವರ್ಷಗಳಿಂದ ಬಡವರಿಗಾಗಿ ಬಡರೋಗಿಗಳಿಗೆ ಸಹಾಯ ಮಾಡುತ್ತಾ ಸಾಂತ್ವಾನ ಮೂಲಕ ಸೇವೆ ಸಲ್ಲಿಸುತ್ತಾ ಬಂದಿದೆ. ಕಳೆದ ಒಂಬತ್ತು ವರ್ಷಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕೆಲವು ಬಡ ಕುಟುಂಬಗಳಿಗೆ ರಮದಾನ್ ತಿಂಗಳ ಪೂರ್ಣ ಖರ್ಚಿಗಾಗಿ ಪಡಿತರ ಸಾಮಗ್ರಿಗಳನ್ನೊಳಗೊಂಡ ಕಿಟ್ಟನ್ನು ನೀಡುತ್ತಿದ್ದು ಈ ವರ್ಷವು ಕೆಲವು ಬಡ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಸಂಸ್ಥೆಯ ಗೌರವ ಅಧ್ಯಕ್ಷ ಸೈಯದ್ ಹಸನ್, ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರ ಸಹಾಯ ಸಹಕಾರದೊಂದಿಗೆ ಕಾರ್ಯಾಚರಿಸುತ್ತಿರುವ ಸಂಸ್ಥೆಯ ಪರ ಮಜೀದ್ ಬಿರಾಲಿ, ಸಂಶುದ್ದೀನ್ ಮಣಿಪುರ, ಸಲಾಂ ಮಣಿಪುರ, ರಫೀಕ್ ಸಾಹೇಬ್ ಮಣಿಪುರ, ಹಾರಿಸ್ ಸಂಶುದ್ದೀನ್ ಮಣಿಪುರ ಮತ್ತು ರಶೀದ್ ಇಸ್ಮಾಯಿಲ್ ಮೂಳೂರು ಅರ್ಹರ ಮನೆಬಾಗಿಲಿಗೆ ರಮ್ಜಾನ್ ಕಿಟ್ ತಲುಪಿಸಿದರು.