ಮಣಿಪಾಲ ಬಳಿ ಗಾಂಜಾ ಸೇವನೆ; ನಾಲ್ವರು ಪೊಲೀಸರ ವಶಕ್ಕೆ
Thursday, March 28, 2024
ಉಡುಪಿ: ಮಣಿಪಾಲ ಶಿಂಬ್ರಾ ಸೇತುವೆಯ ಬಳಿ ಗಾಂಜಾ ಸೇವನೆಗೆ ಸಂಬಂಧಿಸಿ ಪ್ರಜ್ವಲ್ ಸುಧೀರ್(18), ಪ್ರಣೀತ್ ರಾವ್(18) ಹಾಗೂ ಕರಣ್ ವೀರ್(19) ಎಂಬವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮಣಿಪಾಲ ಟೈಗರ್ ಸರ್ಕಲ್ ಬಳಿ ಪೆರಂಪಳ್ಳಿಯ ರಾಘವೇಂದ್ರ(42) ಎಂಬಾತನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.