'ಜನರ ಸೇವೆ ಮಾಡಲು ರಾಜಕಾರಣ ಒಂದೇ ದಾರಿ ಅಂತ ಯಾವ ಮೂರ್ಖ ಹೇಳಿದ? ಸಮಾಜವನ್ನು ಕಟ್ಟಲು ಸಾವಿರ ದಾರಿಗಳಿವೆ, ಮಂಜುನಾಥ್ ಇದು ನಿಮಗೆ ಬೇಕಿತ್ತೆ?’:  ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಪ್ರಶ್ನೆ

'ಜನರ ಸೇವೆ ಮಾಡಲು ರಾಜಕಾರಣ ಒಂದೇ ದಾರಿ ಅಂತ ಯಾವ ಮೂರ್ಖ ಹೇಳಿದ? ಸಮಾಜವನ್ನು ಕಟ್ಟಲು ಸಾವಿರ ದಾರಿಗಳಿವೆ, ಮಂಜುನಾಥ್ ಇದು ನಿಮಗೆ ಬೇಕಿತ್ತೆ?’: ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಪ್ರಶ್ನೆ

ಬೆಂಗಳೂರು: ನಮ್ಮ ಪ್ರೀತಿಯ ವೈದ್ಯ ಡಾ. ಸಿ.ಎನ್. ಮಂಜುನಾಥ್ ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ. ಕಾರಣ ಏನೇ ಇರಲಿ. ಇಲ್ಲಿ ಪಡೆದುದನ್ನು ಅಲ್ಲಿ ಕಳೆದುಕೊಳ್ಳಬಹುದೇನೋ ಎಂದು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತ ಪಡಿಸಿದ್ದಾರೆ.

ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್, ನಮ್ಮ ಪ್ರೀತಿಯ ವೈದ್ಯ ಡಾ. ಸಿ.ಎನ್. ಮಂಜುನಾಥ್ ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ. ಕಾರಣ ಏನೇ ಇರಲಿ. ಇಲ್ಲಿ ಪಡೆದುದನ್ನು ಅಲ್ಲಿ ಕಳೆದುಕೊಳ್ಳಬಹುದೇನೋ. ಜನರ ಸೇವೆ ಮಾಡಲು ರಾಜಕಾರಣ ಒಂದೇ ದಾರಿ ಅಂತ ಯಾವ ಮೂರ್ಖ ಹೇಳಿದ? ಸಮಾಜವನ್ನು ಕಟ್ಟಲು ಸಾವಿರ ದಾರಿಗಳಿವೆ. ಮಂಜುನಾಥ್ ಇದು ನಿಮಗೆ ಬೇಕಿತ್ತೆ?’ ಎಂದು ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ಅವರ ಪೋಸ್ಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪರ –ವಿರೋಧದ ಚರ್ಚೆಗೆ ಗ್ರಾಸವಾಗಿದೆ.

Ads on article

Advertise in articles 1

advertising articles 2

Advertise under the article