ಉಡುಪಿ: ಅವಳಿ ಶಿಶುಗಳ ಮೃತ್ಯು: ನಿತ್ಯಾನಂದ ಒಳಕಾಡುರಿಂದ ಅಂತ್ಯಸಂಸ್ಕಾರ
Tuesday, March 19, 2024
ಉಡುಪಿ: ಅವಳಿ ಗಂಡು ಶಿಶುಗಳ ಅಂತ್ಯಸಂಸ್ಕಾರ ನಡೆಸಲು ಮನೆ ಮಂದಿಗೆ ಅಸಹಾಯಕ ಪರಿಸ್ಥಿತಿ ಎದುರಾದಾಗ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದೆರು.
ಬಾಗಲಕೋಟೆಯ ಹುಲಿಗಮ್ಮ ಎಂಬವರು ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅವಳಿ ಗಂಡು ಶಿಶುಗಳಿಗೆ ಭಾನುವಾರ ಜನ್ಮ ನೀಡಿದ್ದರು. ಆದರೆ ಹೆರಿಗೆ ಆದ ಕೆಲವೇ ಗಂಟೆಗಳಲ್ಲಿ ಎರಡು ಶಿಶುಗಳು ಸಾವನ್ನಪ್ಪಿದವು. ನಡುರಾತ್ರಿಯ ಸಮಯದಲ್ಲಿ ಅಂತ್ಯಸಂಸ್ಕಾರ ನಡೆಸಲು ಮಹಿಳೆಯ ಸಂಬಂಧಿಕರಿಗೆ ಅಸಹಾಯಕತೆ ಎದುರಾದಗ ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೆರವಿಗೆ ಬಂದು, ತಮ್ಮ ಮನೆಯಲ್ಲಿಯೇ ಶೀತಲೀಕೃತ ಶವ ರಕ್ಷಣಾ ಯಂತ್ರದಲ್ಲಿ ಅವಳಿ ಶಿಶುಗಳ ಮೃತದೇಹವನ್ನು ರಕ್ಷಿಸಿಟ್ಟು, ಇಂದು ಬೆಳಿಗ್ಗೆ ಇಂದ್ರಾಳಿಯ ರುದ್ರ ಭೂಮಿಯಲ್ಲಿ ಗೌರಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು.