ರಾಜಕೀಯ ಕಣಕ್ಕಿಳಿದ ಕ್ರಿಕೆಟಿಗ ಯೂಸುಫ್ ಪಠಾಣ್; ಪಶ್ಚಿಮ ಬಂಗಾಳದಲ್ಲಿ 42 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಟಿಎಂಸಿ
ಕೋಲ್ಕೊತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಭಾನುವಾರ ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಭಾರತ ತಂಡ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಬಹರಂಪುರದಿಂದ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕನಾಗಿರುವ ಅಧೀರ್ ರಂಜನ್ ಚೌಧರಿ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಮಾಜಿ ಸಂಸದೆ ಮಹುವಾ ಮೊಯಿತ್ರಾ ಕೃಷ್ಣನಗರದಿಂದ ಸ್ಪರ್ಧಿಸಲಿದ್ದಾರೆ.
ಇದೇ ಮೊದಲ ಬಾರಿಗೆ ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಮೆಗಾ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷವು ತನ್ನ ಅಭ್ಯರ್ಥಿ ಪಟ್ಟಿಯನ್ನು ಪ್ರಕಟಿಸಿದೆ. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಇಂದು ಬಂಗಾಳದ 42 ಲೋಕಸಭಾ ಸ್ಥಾನಗಳಿಗೆ 42 ಅಭ್ಯರ್ಥಿಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ ಎಂದರು.
ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಮಮತಾ ಬ್ಯಾನರ್ಜಿ ಬಂಗಾಳದಲ್ಲಿ ಇಂಡಿಯಾ ಮೈತ್ರಿಕೂಟದೊಂದಿಗೆ ಮೈತ್ರಿಯಿಲ್ಲ. ಏಕಾಂಗಿ ಹೋರಾಟ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಟಿಎಂಸಿ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಮತ್ತು 'ಅಸ್ಸಾಂ ಮತ್ತು ಮೇಘಾಲಯದಲ್ಲೂ ಸ್ಪರ್ಧಿಸಲಿದೆ' ಎಂದು ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.
ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ 'ಉತ್ತರ ಪ್ರದೇಶದ ಒಂದು ಲೋಕಸಭಾ ಕ್ಷೇತ್ರದಲ್ಲಿ' ಸ್ಪರ್ಧಿಸಲು ತಮ್ಮ ಪಕ್ಷವು ಮಾತುಕತೆ ನಡೆಸುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಸಾಮವೇಶದಲ್ಲಿ ಲಕ್ಷಾಂತರ ಬೆಂಬಲಿಗರು ಮತ್ತು ಹಲವಾರು ಬ್ಲಾಕ್ ಮಟ್ಟದ ಮುಖಂಡರು ಭಾಗವಹಿಸಿದ್ದರು. 'ಜನ ಗರ್ಜನ್ ಸಭಾ' ಹೆಸರಿನ ಈ ಬೃಹತ್ ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮುಖ್ಯ ಭಾಷಣಕಾರರಾಗಿದ್ದರು.
ಯಾರಿಗೆ ಟಿಎಂಸಿ ಟಿಕೆಟ್? ಯಾರಿಗೆ ಇಲ್ಲ?
ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ಉತ್ತರಾಧಿಕಾರಿ ಅಭಿಷೇಕ್ ಬ್ಯಾನರ್ಜಿ ಡೈಮಂಡ್ ಹಾರ್ಬರ್‌ನಿಂದ ಸ್ಪರ್ಧಿಸಲಿದ್ದಾರೆ. ನಟ ಶತ್ರುಘ್ನ ಸಿನ್ಹಾ ಅವರು ಅಸನ್ಸೋಲ್‌ನಿಂದ ಲೋಕಸಭೆ ಚುನಾವಣಾ ಕಣಕ್ಕಿಳಿಯಲಿದ್ದಾರೆ. 1983ರಲ್ಲಿ ಭಾರತ ವಿಶ್ವಕಪ್ ಗೆದ್ದ ಕ್ರಿಕೆಟ್ ತಂಡದ ಸದಸ್ಯ ಕೀರ್ತಿ ಅಜಾದ್ ದುರ್ಗಾಪುರ ಬುರ್ದ್ವಾನ್‌ನಿಂದ ಕಣಕ್ಕಿಳಿಯುತ್ತಿದ್ದಾರೆ.
ಪ್ರಸ್ತುತ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಪ್ರತಿನಿಧಿಸುತ್ತಿರುವ ಬಹರಂಪುರದಿಂದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಕಣಕ್ಕಿಳಿಯುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಸಂದೇಶಖಾಲಿ ವಿವಾದದ ನಂತರ ನುಸ್ರತ್ ಜಹಾನ್ ಅವರನ್ನು ಬಸಿರ್ಹತ್ ಸ್ಥಾನದಿಂದ ಕೈಬಿಡಲಾಗಿದೆ. ಅವರ ಬದಲಿಗೆ ಇಲ್ಲಿ ನೂರುಲ್ ಇಸ್ಲಾಂ ಅವರನ್ನು ಕಣಕ್ಕಿಳಿಸಲಾಗಿದೆ.
ಟಿಎಂಸಿ ಅಭ್ಯರ್ಥಿಗಳ ಪೂರ್ಣ ಪಟ್ಟಿ:
ಕೂಚ್‌ಬೆಹರ್: ಜಗದೀಶ್ ಚಂದ್ರ ಬಸುನಿಯಾ
ಆಲಿಪುರ್ದುಯಾರ್: ಪ್ರಕಾಶ್ ಚಿಕ್ ಬರೈಕ್
ಜಲ್ಪಾಯ್‌ಗುರಿ: ನಿರ್ಮಲ್ ಚಂದ್ರ ರಾಯ್
ದಾರ್ಜಿಲಿಂಗ್: ಗೋಪಾಲ್ ಲಾಮಾ
ರಾಯ್‌ಗುಂಜ್: ಕೃಷ್ಣ ಕಲ್ಯಾಣಿ
ಬಾಲುರ್ಘಾಟ್: ಬಿಪ್ಲಬ್ ಮಿತ್ರ
ಮಾಲ್ಡಾ ಉತ್ತರ: ಪ್ರಸೂನ್ ಬ್ಯಾನರ್ಜಿ
ಮಾಲ್ಡಾ ದಕ್ಷಿಣ: ಶಹನವಾಜ್ ಅಲಿ ರೆಹಾನ್
ಜಂಗೀಪುರ್: ಖಲಿಲುರ್ ರೆಹಮಾನ್
ಬೆರ್ಹಾಂಪುರ್: ಕ್ರಿಕೆಟಿಗ ಯೂಸುಫ್ ಪಠಾಣ್
ಮುರ್ಷಿದಾಬಾದ್: ಅಬು ತಾಹೆರ್ ಖಾನ್
ಕೃಷ್ಣನಗರ: ಮಹುವಾ ಮೊಯಿತ್ರಾ (ಮಹಿಳೆ)
ರಾಣಾಘಾಟ್: ಮುಕುಟ್ ಮಣಿ ಅಧಿಕಾರಿ
ಬೋಂಗಾಂವ್: ಬಿಸ್ವಜಿತ್ ದಾಸ್
ಬಾರಾ ಕಪೋರ್: ಪಾರ್ಥ ಭೌಮಿಕ್
ದುಂಡುಂ: ಸೌಗತ ರಾಯ್
ಬಾರಾಸತ್: ಕಾಕೊಲಿ ಘೋಷ್ ದಸ್ತಿದಾರ್ (ಮಹಿಳೆ)
ಬಾಸಿರ್‌ಹಾಟ್: ಹಾಜಿ ನೂರುಲ್ ಇಸ್ಲಾಂ
ಜಾಯ್‌ನಗರ್: ಪ್ರತಿಮಾ ಮೊಂಡಲ್ (ಮಹಿಳೆ)
ಮಥುರಾಪುರ್: ಬಾಪಿ ಹಾಲ್ದರ್
ಡೈಮಂಡ್ ಹಾರ್ಬರ್: ಅಭಿಷೇಕ್ ಬ್ಯಾನರ್ಜಿ
ಜಾದವ್‌ಪುರ್: ಸಯೋನಿ ಘೋಷ್ (ಮಹಿಳೆ)
ಕೋಲ್ಕತ್ತಾ ದಕ್ಷಿಣ: ಮಲಾ ರಾಯ್ (ಮಹಿಳೆ)
ಕೋಲ್ಕತ್ತಾ ಉತ್ತರ: ಸುದೀಪ್ ಬ್ಯಾನರ್ಜಿ
ಹೌರಾ: ಪ್ರಸೂನ್ ಬ್ಯಾನರ್ಜಿ
ಉಕುಬೆರಾ: ಸಾಜ್‌ದಾ ಅಹಮದ್
ಶ್ರೀರಾಂಪುರ: ಕಲ್ಯಾಣ್ ಬ್ಯಾನರ್ಜಿ
ಹೂಗ್ಲಿ: ರಚನಾ ಬ್ಯಾನರ್ಜಿ (ಮಹಿಳೆ)
ಅರಂಬಾಗ್: ಮಿತಾಲಿ ಬಾಗ್
ತಮ್ಲೂಕ್: ದೇಬಾಂಗ್ಶು ಭಟ್ಟಾಚಾರ್ಯ
ಕಾಂಥಿ: ಉತ್ತಮ್ ಬಾರಿಕ್
ಘಟಲ್: ದೇವ್ ದೀಪಕ್ ಅಧಿಕಾರಿ
ಝಾರ್ಗ್ರಾಮ್: ಕಲಿಪದ ಸೋರೆನ್
ಮಿಡ್ನಾಪುರ: ಜೂನ್ ಮಲಿಯಾ (ಮಹಿಳೆ)
ಪುರುಲಿಯಾ: ಸಂತೀರಾಮ್ ಮಹಾತೋ
ಬುರ್ದ್ವಾನ್ ಪಶ್ಚಿಮ: ಅರುಪ್ ಚಲ್ರಾನ್ಯೋರ್ಟಿ
ಬುರ್ದ್ವಾನ್ ಪೂರ್ವ: ಡಾ. ಶರ್ಮಿಲಾ ಸರ್ಕಾರ್ (ಮಹಿಳೆ)
ದುರ್ಗಾಪುರ ಬುರ್ದ್ವಾನ್: ಕಿರ್ತಿ ಆಜಾದ್
ಅಸನ್ಸೋಲ್: ಶತ್ರುಘ್ನ ಸಿನ್ಹಾ
ಬೋಲ್ಪುರ್: ಅಸಿತ್ ಮಲ್