ಮದುವೆ ಖುಷಿಯಲ್ಲಿದ್ದವರು ಮಸಣಕ್ಕೆ; ಮಹಾರಾಷ್ಟ್ರದ ಬಳಿ ಬಸ್‌ ಹಿಂಭಾಗಕ್ಕೆ ಕ್ರೂಸರ್ ಢಿಕ್ಕಿ; ಬಾಗಲಕೋಟೆ ಜಿಲ್ಲೆಯ ನಾಲ್ವರು ಬಲಿ

ಮದುವೆ ಖುಷಿಯಲ್ಲಿದ್ದವರು ಮಸಣಕ್ಕೆ; ಮಹಾರಾಷ್ಟ್ರದ ಬಳಿ ಬಸ್‌ ಹಿಂಭಾಗಕ್ಕೆ ಕ್ರೂಸರ್ ಢಿಕ್ಕಿ; ಬಾಗಲಕೋಟೆ ಜಿಲ್ಲೆಯ ನಾಲ್ವರು ಬಲಿ

ಬಾಗಲಕೋಟೆ: ಮಹಾರಾಷ್ಟ್ರದ ಜತ್ತ ಬಳಿಯ ನಾಗಾಸಪಾಟಾ ಎಂಬಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಾಗಲಕೋಟೆ ಜಿಲ್ಲೆಯ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಸ್‌ ಹಿಂಭಾಗಕ್ಕೆ ಕ್ರೂಸರ್ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟರೆ, ಐವರು ಗಂಭೀರ ಗಾಯಗೊಂಡಿದ್ದಾರೆ. ಬಾಗಲಕೋಟೆಯ ನಾಲ್ವರು ಯುವತಿಯರು ಮಹಾರಾಷ್ಟ್ರದ ಶಿವಾನಿ ಅಂಬೇಕರ್ ಎಂಬುವರ ಮದುವೆಗೆ ಹೊರಟಿದ್ದರು. ಖಾಸಗಿ ವೊಲ್ವೊ ಬಸ್​​​ಗೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ವಧುವಿನ ತಂಗಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಕನಮಡಿ ಗ್ರಾಮದ ಅನುಸೂಯಾ ಮೋರೆ (56), ಲೋಕಾಪುರ ಗ್ರಾಮದ ನಿವೇದಿತಾ (17) ರೆಹಮತ್ ಪುರದ ಭಾಗ್ಯಶ್ರೀ ಅಂಬೇಕರ್ (18) ಹಾಗೂ ಅಡಿಹುಡಿ ಗ್ರಾಮದ ಉಜ್ವಲಾ ಸಿಂಧೆ (19) ಎಂದು ಗುರುತಿಸಲಾಗಿದೆ. ಇಂದು ಶಿವಾನಿ ಅಂಬೇಕರ್ ಮದುವೆಯಿತ್ತು. ಹೀಗಾಗಿ ಬುಧವಾರ ಅರಿಶಿಣ ಶಾಸ್ತ್ರ ಕಾರ್ಯಕ್ಕೆ ಇವರೆಲ್ಲ ಹೊರಟಿದ್ದರು.

ಜಮಖಂಡಿ ತಾಲೂಕಿನ ರೆಹಮದ್ಪುರ್ ಗ್ರಾಮದಿಂದ ಮಹಾರಾಷ್ಟ್ರದ ತಾಜಗಾಂವಗೆ ಮದುವೆಗಾಗಿ ಕ್ರೂಸರ್‌ ವಾಹನದಲ್ಲಿ ಹೊರಟ್ಟಿದ್ದರು. ಕ್ರೂಸರ್‌ನಲ್ಲಿ ಸುಮಾರು 13 ಜನರಿದ್ದರು. ಮದುವೆ ಖುಷಿಯಲ್ಲಿದ್ದವರು ಮಸಣ ಸೇರಿದ್ದಾರೆ. ಮಹಾರಾಷ್ಟ್ರದ ಜತ್ತ ಸಮೀಪ ನಿನ್ನೆ ಬುಧವಾರ ದುರ್ಘಟನೆ ನಡೆದಿದ್ದು‌ ತಡವಾಗಿ ಬೆಳಕಿಗೆ ಬಂದಿದೆ.

Ads on article

Advertise in articles 1

advertising articles 2

Advertise under the article