ರಾಘವೇಂದ್ರರನ್ನು ಸೋಲಿಸಲು ಕಾಂಗ್ರೆಸಿಗೂ, ಈಶ್ವರಪ್ಪಗೂ ಸಾಧ್ಯವಿಲ್ಲ: ಆರಗ ಜ್ಞಾನೇಂದ್ರ
Saturday, April 13, 2024
ಉಡುಪಿ: ಈಶ್ವರಪ್ಪನವರು ಹಿಂದೆ ಸರಿದರೆ ತುಂಬಾ ಒಳ್ಳೆಯದಾಗುತ್ತೆ, ಇಲ್ಲವಾದರೆ ಅವರ ನೆಲೆ ಏನು ಅನ್ನೋದು ಗೊತ್ತಾಗುತ್ತೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈಶ್ವರಪ್ಪ ಬಂಡಾಯ ಸ್ಪರ್ಧೆಯ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರಿಗೆ ನಾಮಪತ್ರ ವಾಪಸ್ಸು ಪಡೆಯಲು ಸ್ವಲ್ಪ ದಿನ ಅವಕಾಶ ಇದೆ. ಅವರ ಪರಿಸ್ಥಿತಿ ಏನು ಅನ್ನೋದನ್ನು ತಿರುಗಾಟ ಮಾಡಿ ಗಮನಿಸಿರುತ್ತಾರೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಘವೇಂದ್ರ ಆ ಕ್ಷೇತ್ರದಲ್ಲಿ ಅಪಾರ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ರಾಘವೇಂದ್ರರನ್ನು ಸೋಲಿಸಲು ಕಾಂಗ್ರೆಸಿಗೂ ಸಾಧ್ಯವಿಲ್ಲ, ಈಶ್ವರಪ್ಪನಿಗೂ ಸಾಧ್ಯವಿಲ್ಲ. ಈಶ್ವರಪ್ಪ ಮತ್ತು ನಾನು ಅತ್ಯಂತ ವಿಶ್ವಾಸಿಗಳು. ಹೀಗಾಗಿ ನಾಮಪತ್ರ ವಾಪಾಸು ಪಡೆಯಲು ಅವರಿಗೆ ಸಲಹೆ ಕೊಡುತ್ತೇನೆ ಎಂದು ಹೇಳಿದರು.