ಮಳೆ ಪ್ರವಾಹ ಸಂತ್ರಸ್ಥರಿಗೆ ಆಸರೆಯಾದ ಹೆಮ್ಮೆಯ ದುಬೈ ಕನ್ನಡ ಸಂಘ
Tuesday, April 30, 2024
ಅಬುಧಾಬಿ: ಶಾರ್ಜಾ ಅಜ್ಮಾನ್ ಭಾಗದಲ್ಲಿ ಮಳೆ ಪ್ರವಾಹದಿಂದ ಕಳೆದ ಎಂಟು ದಿನಗಳಿಂದ ಮನೆಯಿಂದ ಹೊರಬರಲಾಗದೆ ಸಂಕಷ್ಟದಲ್ಲಿದ್ದ ಭಾರತೀಯರು ಮತ್ತು ಇತರ ವಿದೇಶಿಯರಿಗೆ ಆಹಾರ ಪದಾರ್ಥ, ನೀರು ಮತ್ತು ಇನ್ನಿತರ ಅವಶ್ಯಕ ವಸ್ತುಗಳನ್ನು ಹೆಮ್ಮೆಯ ದುಬೈ ಕನ್ನಡ ಸಂಘದ ಸಹಾಯ ಹಸ್ತ ವಿಭಾಗದಿಂದ ತಲುಪಿಸಲಾಯಿತು.
ಸಹಾಯ ಹಸ್ತ ವಿಭಾಗದ ರಫೀಕಲಿ ಕೊಡಗು, ಹಾದಿಯ ಮಂಡ್ಯ, ಪ್ರತಾಪ್ ಮಡಿಕೇರಿ, ಸಂತೋಷ್ ಶಿವಮೊಗ್ಗ, ಅರ್ಪಿತಾ ಬೆಂಗಳೂರು, ಅಯ್ಯುಬ್ ಶಿವಮೊಗ್ಗ, ನಝೀರ ಮಂಡ್ಯ, ಮತ್ತು ಅಬ್ರಾರ್ ಅವರು ಸೇರಿ ಗಾಡಿಗಳು ಹೋಗದ ಸ್ಥಳಗಳಿಗೆ ದೋಣಿ ಬಳಸಿ ಊಟದ ಪದಾರ್ಥಗಳನ್ನು ಮತ್ತು ಅವಶ್ಯಕ ವಸ್ತುಗಳನ್ನು ಬೆಳಿಗ್ಗೆಯಿಂದ ರಾತ್ರಿ ತನಕ ನೂರಾರು ಸಂಕಷ್ಟದಲ್ಲಿರುವ ಜನರಿಗೆ ತಲುಪಿಸಿದರು.
ಹಾಗೆ ದುಬೈಯಲ್ಲಿರುವ ಎಂಬಿಎಮ್ ಕ್ಲಿನಿಕ್ ಜೊತೆ ಸೇರಿ ಉಚಿತ ಅರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಔಷಧಿಯನ್ನು ತಲುಪಿಸುವಲ್ಲಿ ತಂಡ ನಿರ್ಣಾಯಕ ಪಾತ್ರವಹಿಸದರು.