
ಮೂಡಿಗೆರೆಯ ಹರಿಹರ ಸುತ್ತಮುತ್ತ ಭರ್ಜರಿ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ; ನಯನಾ ಮೋಟಮ್ಮ, ಕುಮಾರಸ್ವಾಮಿ ಸಾಥ್
Saturday, April 20, 2024
ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸಿದ್ದು, ಜನರ ಮುಂದೆ ತೆರಳಿ ಮತಯಾಚನೆ ನಡೆಸಿದರು.
ಮೂಡಿಗೆರೆ ತಾಲೂಕಿನ ಹರಿಹರದ ಹಫ್ಳಿಯಲ್ಲಿ, ಮರ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಹರಿಹರದ ಹಳ್ಳಿಯಲ್ಲಿ, ಮುಗುಳುವಳ್ಳಿಯಲ್ಲಿ, ಅಂಬಳೆ ಗ್ರಾಮದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದು, ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕಿ ನಯನಾ ಮೋಟಮ್ಮ , ಮಾಜಿ ಶಾಸಕ ಕುಮಾರಸ್ವಾಮಿ ಹಾಗೂ ಪಕ್ಷದ ಪ್ರಮುಖರು ಹಾಜರಿದ್ದರು.