
ತಮಗೆ ಮತ ನೀಡಿ ಗೆಲ್ಲಿಸುವಂತೆ ಹೆಬ್ರಿಯಲ್ಲಿ ಮತಯಾಚನೆ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ
Friday, April 19, 2024
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆಯವರು ಶುಕ್ರವಾರ ಹೆಬ್ರಿಯಲ್ಲಿ ತಮ್ಮ ಪಕ್ಷದ ಮುಖಂಡರೊಂದಿಗೆ ಹಾಗು ಕಾರ್ಯಕರ್ತರೊಂದಿಗೆ ಮತಯಾಚನೆ ನಡೆಸಿದರು.
ಹೆಬ್ರಿಯ ಕಚ್ಚೂರು ಗ್ರಾಮದ ಬೆಳಂಜೆಯಲ್ಲಿರುವ ಲಕ್ಷ್ಮೀ ನರಸಿಂಹ ಆಗ್ರೋ ಇಂಡಸ್ಟ್ರೀಸ್'ನ ಸಿಬ್ಬಂದಿಗಳಲ್ಲಿ ಮತಯಾಚನೆ ಮಾಡಿದರು. ಬಳಿಕ ಹೆಬ್ರಿಯ ಶ್ರೀ ಗಜಾನನ ಕ್ಯಾಷ್ಯೂ ಇಂಡಸ್ಟ್ರೀಸ್ ನಲ್ಲಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ ಈ ಬಾರಿ ತಮಗೆ ಮತ ನೀಡುವಂತೆ ವಿನಂತಿಸಿದರು.