ಕಾರ್ಕಳದಲ್ಲಿ ಕಾಂಗ್ರೆಸ್ಸಿನಿಂದ ಬೃಹತ್ ವಾಹನ ರ‍್ಯಾಲಿ; ಪರಿವರ್ತನಾ ಜಾಥಾ: ಜಯಪ್ರಕಾಶ್‌ ಹೆಗ್ಡೆಯಿಂದ ಭರ್ಜರಿ ಪ್ರಚಾರ

ಕಾರ್ಕಳ: ಕಾರ್ಕಳ ಕಾಂಗ್ರೇಸ್‌ ಪಕ್ಷದ ವತಿಯಿಂದ ಲೋಕಸಭಾ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಬೃಹತ್‌ ವಾಹನ ರ್‍ಯಾಲಿ ಪರಿವರ್ತನಾ ಜಾಥಾಕ್ಕೆ ಪುಲ್ಕೇರಿ ಬೈಪಾಸ್‌ ವೃತ್ತದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.ಮಾಜಿ ಸಚಿವ ಅಭಯಚಂದ್ರ ಜೈನ್‌ ಕಾಂಗ್ರೆಸ್‌ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು.





ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ, ಕಾಂಗ್ರೆಸ್‌ ಮುಖಂಡ ಉದಯಕುಮಾರ್‌ ಶೆಟ್ಟಿ, ಜಿ.ಎ.ಬಾವ ಸಹಿತ ಹಲವು ಕಾಂಗ್ರೆಸ್‌ ಮುಖಂಡರು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ದ್ವಿಚಕ್ರ, ಲಘು ವಾಹನ ಸಹಿತ ಅನೇಕ ವಾಹನಗಳಲ್ಲಿ ಅಪಾರ ಸಂಖ್ಯೆಯ ಮಂದಿ ನಗರದ ಮುಖ್ಯ ಪೇಟೆಯಲ್ಲಿ ರಾಲಿ ಮೂಲಕ ಸಂಚರಿಸಿ ಹೆಬ್ರಿಯಲ್ಲಿ ನಡೆದ ಬೃಹತ್‌ ಕಾಂಗ್ರೆಸ್‌ ಬಹಿರಂಗ ಸಭೆಯತ್ತ ತೆರಳಿದರು.