ಕಾರ್ಕಳದಲ್ಲಿ ಮತ ಯಾಚನೆ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ

ಕಾರ್ಕಳದಲ್ಲಿ ಮತ ಯಾಚನೆ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ

 

ಕಾರ್ಕಳ: ಗುರುವಾರ ಕಾರ್ಕಳ ವಿಧಾನಸಭಾ ಕ್ಷೇತ್ರದ ಕುಕ್ಕುಂದೂರು ಗ್ರಾಮ ವ್ಯಾಪ್ತಿಯ  ಅಯ್ಯಪ್ಪ ನಗರದ  ಸುರೇಶ್ ಶೆಟ್ಟಿಗಾರ್ ಮನೆಯ ಮುಂದೆ  ನಡೆದ ಸಭೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮತ ಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ  ಕೆದಿಂಜೆ ಸುಪ್ರಿತ್  ಶೆಟ್ಟಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು , ಮುನಿಯಾಲು ಉದಯ ಕುಮಾರ ಶೆಟ್ಟಿ, ಸುಭಿತ್,  ವಿಜ್ಞೇಶ  ಕಿಣಿ, ಡಿ.ಆರ್ ರಾಜಣ್ಣ, ಸದಾಶಿವ ದೆವಾಡಿಗ,  ಶುಭದ್ ರಾವ್, ಥಾಮಸ್ ಮಸ್ಕರನ್ಸ್ ರವರು ಹಾಗೂ ಇತರೆ ಮುಂಚೂಣಿ ಘಟಕದ ಅಧ್ಯಕ್ಷರು ಸದಸ್ಯರು ನಾಯಕರು, ಕಾರ್ಯಕರ್ತರು  ಉಪಸ್ಥಿತರಿದ್ದರು. 

ಇದಕ್ಕೂ ಮೊದಲು ಕಾರ್ಕಳದ ಕರಿಯಕಲ್ಲುವಿನಲ್ಲಿರುವ ಮಾಧವ ಪ್ರಕಾಶ್ ಕ್ಯಾಷ್ಯೂ ಇಂಡಸ್ಟ್ರೀಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಲ್ಲಿ ಜಯಪ್ರಕಾಶ್ ಹೆಗ್ಡೆ ಮತ ಯಾಚನೆ ನಡೆಸಿದರು.

Ads on article

Advertise in articles 1

advertising articles 2

Advertise under the article