
ಜನಪರ, ಅಭಿವೃದ್ಧಿ ಕಾಳಜಿಯುಳ್ಳ ಜಯಪ್ರಕಾಶ್ ಹೆಗ್ಡೆ ಅತ್ಯಧಿಕ ಮತಗಳಿಂದ ಗೆಲ್ಲಿಸಿ: ಸೊರಕೆ: ಹಿರಿಯಡ್ಕದ ಹಲವು ಕಾರ್ಖಾನೆಗಳಿಗೆ ಭೇಟಿ ನೀಡಿ ಮತಯಾಚಿಸಿದ ಜಯಪ್ರಕಾಶ್ ಹೆಗ್ಡೆ
ಹಿರಿಯಡ್ಕ: ಉಡುಪಿ ಜಿಲ್ಲೆಯಾಗಲು ಮೂಲ ಕಾರಣ ಜಯಪ್ರಕಾಶ್ ಹೆಗ್ಡೆ. ನಮ್ಮ ಜಿಲ್ಲೆಯಲ್ಲಿನ ರಸ್ತೆ, ಮೂಲಭೂತ ಸೌಕರ್ಯಗಳಿಗೆ ಅವರ ಕಾಲದಲ್ಲಿಯೇ ಹೆಚ್ಚು ಒತ್ತು ನೀಡಿ ಹಲವು ಸಮಸ್ಯೆಗಳನ್ನು ಪರಿಹರಿಸಿದ್ದಾರೆ ಎಂದು ಕೆಪಿಸಿಸಿ ಪ್ರೆಅಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿನ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಗುರುವಾರ ಹಿರಿಯಡ್ಕದಲ್ಲಿ ನಡೆದ ಮತಯಾಚನೆ ವೇಳೆ ಮಾತನಾಡುತ್ತಿದ್ದ ಸೊರಕೆ, ಕಾಂಗ್ರೆಸ್ ಜನಪರವಾದ ಕೆಲಸ ಮಾಡುತ್ತಿದೆ. ರಾಜ್ಯದಲ್ಲೂ ಬಡವರ, ಹಿಂದುಳಿದ ವರ್ಗದವರ ಪರನಿಂತು ಅಭಿವೃದ್ಧಿಪರ ಕೆಲಸ ಕಾರ್ಯ ಮಾಡುತ್ತಿರುವ ಕಾಂಗ್ರೆಸ್ ಜೊತೆ ತಾವೆಲ್ಲರೂ ಕೈಜೋಡಿಸಲು ಈ ಬಾರಿ ಹೆಗ್ಡೆ ಅವರನ್ನು ಅತ್ಯಧಿಕ ಮತ ಗೆಲ್ಲಿಸಿ ಎಂದು ಮನವಿ ಮಾಡಿದರು.
ಬಳಿಕ ಹಿರಿಯಡ್ಕದ ಸಮೀಪವಿರುವ ಹರಿಕಂಡಿಗೆಯ ಶಂಕರ್ ಕ್ಯಾಷ್ಯು ಇಂಡಸ್ಟ್ರೀಸ್ ನಲ್ಲಿ, ಹರಿಕಂಡಿಗೆಯ ಅನ್ನಪೂರ್ಣ ಇಂಡಸ್ಟ್ರೀಸ್ ನಲ್ಲಿ, ಮಹಾಲಸಾ ಕ್ಯಾಷ್ಯೂ ಎಕ್ಸ್ಪೋರ್ಟ್'ಗೆ ತೆರಳಿ ಅಲ್ಲಿನ ಕಾರ್ಮಿಕರನ್ನು ಭೇಟಿ ಮಾಡಿ ಅವರ ಕಷ್ಟಗಳನ್ನು ಆಲಿಸಿ ಮತಯಾಚನೆ ಮಾಡಿದರು.
ನಂತರ ಹಿರಿಯಡ್ಕ ಸಮೀಪದ ಹರಿಖಂಡಿಗೆ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.