ತರೀಕೆರೆ, ಅಜ್ಜಂಪುರ ಸೇರಿದಂತೆ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ; ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ
Monday, April 15, 2024
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ರವಿವಾರ ಚಿಕ್ಕಮಗಳೂರಿನ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಿ ಮತ ಯಾಚನೆ ಮಾಡಿದರು.
ತರೀಕೆರೆ ತಾಲೂಕಿನ ನಾರಾಯಣಪುರದಲ್ಲಿ, ಶಿವನಿಯಲ್ಲಿ, ಅಜ್ಜಂಪುರ ತಾಲೂಕಿನ ಸೊಲ್ಲಾಪುರದಲ್ಲಿ, ಗಡೀಹಳ್ಳಿ ಗ್ರಾಮದಲ್ಲಿ, ಗೌರಪುರದಲ್ಲಿ, ಸೊಕ್ಕೆ ಗ್ರಾಮ ಸೇರಿದಂತೆ ವಿವಿಧ ಕಡೆಗಳಲ್ಲಿ ಮತಯಾಚನೆ ಮಾಡಿದರು.
ಹಲವು ಕಡೆಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಜಯಪ್ರಕಾಶ್ ಹೆಗ್ಡೆ, ಸ್ಥಳೀಯರ ಸಮಸ್ಯೆ ಆಲಿಸಿ ಅವರ ದಶಕದ ಅಳಲು ನೀಗಿ, ಬದುಕಿಗೆ ಶಾಶ್ವತ ನೆರಳು ಲಭಿಸುವ ಭರವಸೆ ನೀಡಿ ಮತ ಯಾಚಿಸಿದರು.