ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರ ಇನಾಯತ್ ಅಲಿಯಿಂದ ಬಿರುಸಿನ ಪ್ರಚಾರ; ನೀರುಮಾರ್ಗ, ಮಲ್ಲೂರು, ಉಳಾಯಿಬೆಟ್ಟು, ತಿರುವೈಲ್-ವಾಮಂಜೂರು,ಪಡುಪೆರಾರ, ಕಂದಾವರದಲ್ಲಿ ಪ್ರಚಾರ ಸಭೆ
Sunday, April 14, 2024
ಸುರತ್ಕಲ್: ಈ ಬಾರಿಯ ಲೋಕಸಭಾ ಚುನಾವಣೆಗೆ ದಕ್ಷಿಣಕನ್ನಡ ಕ್ಷೇತ್ರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಪರವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ರವಿವಾರ ಪ್ರಚಾರ ಕಾರ್ಯ, ಸಭೆ ನಡೆಸಿದರು.
ಚುನಾವಣೆಯ ಹಿನ್ನೆಲೆಯಲ್ಲಿ ನೀರುಮಾರ್ಗ ವಲಯ ಕಾಂಗ್ರೆಸ್ ಸಮಿತಿಯ ಸಭೆ ನಡೆಸಿದ ಇನಾಯತ್ ಅಲಿ, ಬಳಿಕ ತನ್ನ ವೇತೃತ್ವದಲ್ಲಿ ಮಲ್ಲೂರು ವಲಯ ಕಾಂಗ್ರೆಸ್ ಸಮಿತಿಯ ಸಭೆ ನಡೆಸಿ ಪದ್ಮರಾಜ್ ಗೆಲುವಿಗೆ ಎಲ್ಲರೂ ಶ್ರಮಿಸುವಂತೆ ಮನವಿ ಮಾಡಿದರು.
ಬಳಿಕ ಇನಾಯತ್ ಅಲಿ ನೇತೃತ್ವದಲ್ಲಿ ಉಳಾಯಿಬೆಟ್ಟು ವಲಯ ಕಾಂಗ್ರೆಸ್ ಸಮಿತಿ, ತಿರುವೈಲ್-ವಾಮಂಜೂರು ವಲಯ ಕಾಂಗ್ರೆಸ್ ಸಮಿತಿ, ಪಡುಪೆರಾರ ವಲಯ ಕಾಂಗ್ರೆಸ್ ಸಮಿತಿಯ ಸಭೆ, ಕಂದಾವರ ವಲಯ ಕಾಂಗ್ರೆಸ್ ಸಮಿತಿಯ ಸಭೆ ನಡೆಸಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಬಹುಮತದ ಮೂಲಕ ಗೆಲುವು ಸಾಧಿಸಲು ಬೇಕಾದ ಕಾರ್ಯ ವೈಖರಿ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.