ಕುಂದಾಪುರದ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ; ಗೆಲ್ಲಿಸುವಂತೆ ಮತದಾರರಲ್ಲಿ ಮನವಿ

ಕುಂದಾಪುರದ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ; ಗೆಲ್ಲಿಸುವಂತೆ ಮತದಾರರಲ್ಲಿ ಮನವಿ

ಕುಂದಾಪುರ: ಉಡುಪಿ-ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆಅವರು ಬುಧವಾರ ಕುಂದಾಪುರದ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಿದರು.







ಕುಂದಾಪುರ ತಾಲೂಕಿನ ಅಸೋಡು ಗ್ರಾಮದ ಅಜಿತ್ ಶೆಟ್ಟಿ ಅವರ ಮನೆಯ ಆವರಣದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಈ ಬಾರಿ ಬಹುಮತದ ಮೂಲಕ ತನಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.

ಇದಕ್ಕೂ ಮುನ್ನ ಕುಂದಾಪುರ ವಿಧಾನಸಭಾ ಕ್ಷೇತ್ರದ  ಕುಂದಾಪುರ ಬ್ಲಾಕ್‌ ಕಾಂಗ್ರೆಸ್ ನ  ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಅವರ  ನೇತೃತ್ವದಲ್ಲಿ  ಕೆದೂರು   ಗ್ರಾಮದ   ಸದಾನಂದ ಶೆಟ್ಟಿ ಅವರ ಮನೆಯ ಬಳಿ   ಚುನಾವಣೆಯ ಪ್ರಚಾರ ನಡೆಯಲಾಯಿತು. 

ಈ ಸಂದರ್ಭದಲ್ಲಿ ಹಿರಿಯರ ನಾಯಕರು ನಿಕಟ ಪೂರ್ವ ಅಭ್ಯರ್ಥಿಯಾದ ದಿನೇಶ ಹೆಗ್ಡೆ,  ಮಲ್ಯಾಡಿ ಶಿವರಾಮ ಶೆಟ್ಟಿ ಗ್ರಾಮೀಣ ಅಧ್ಯಕ್ಷರು  ಸ್ಥಳೀಯ ಬ್ಲಾಕ್‌  ಕಾಂಗ್ರೆಸ್  ಮುಂಚೂಣಿ ಘಟಕದ ಅಧ್ಯಕ್ಷರು ಸದಸ್ಯರು ನಾಯಕರು, ಕಾರ್ಯಕರ್ತರು  ಉಪಸ್ಥಿತರಿದ್ದರು.

ಈ ಮೊದಲು ಕುಂದಾಪುರ ವಿಧಾನಸಭಾ ಕ್ಷೇತ್ರದ  ಬೇಳೂರು ಪಂಚಾಯತಿಯ ಮೊಗೆಬೆಟ್ಟು  ಗ್ರಾಮದ  ಡಾ ಕುಸುಮಾಕರ  ಶೆಟ್ಟಿ ರವರ ಮನೆಯ ಬಳಿ ಚುನಾವಣೆಯ ಪ್ರಚಾರ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಹೆಗ್ಡೆ ಅವರಿಗೆ ದಿನೇಶ ಹೆಗ್ಡೆ, ಸದಾನಂದ  ಶೆಟ್ಟಿ, ಗ್ರಾಮೀಣ ಅಧ್ಯಕ್ಷರು ಸ್ಥಳೀಯ ಬ್ಲಾಕ್‌  ಕಾಂಗ್ರೆಸ್  ಮುಂಚೂಣಿ ಘಟಕದ ಅಧ್ಯಕ್ಷರು ಸದಸ್ಯರು ನಾಯಕರು, ಕಾರ್ಯಕರ್ತರು  ಸಾಥ್ ನೀಡಿದರು. 

Ads on article

Advertise in articles 1

advertising articles 2

Advertise under the article