ಉಡುಪಿ ನಗರದಲ್ಲಿ ಬಿರುಸಿನ ಮತ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ; ಹಲವು ಶೋರೂಮ್, ಕಾರ್ಮಿಕರ ಭೇಟಿ

ಉಡುಪಿ ನಗರದಲ್ಲಿ ಬಿರುಸಿನ ಮತ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ; ಹಲವು ಶೋರೂಮ್, ಕಾರ್ಮಿಕರ ಭೇಟಿ

ಉಡುಪಿ: ಉಡುಪಿ ನಗರದಾದ್ಯಂತ ಬುಧವಾರ ಉಡುಪಿ-ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಬಿರುಸಿನ ಮತಯಾಚನೆ ನಡೆಸಿ ತಮ್ಮ ಗೆಲುವಿಗೆ ಸಹಕರಿಸುವಂತೆ ಎಂಕಟದಾರರಲ್ಲಿ ಮನವಿ ಮಾಡಿದರು.

ಉಡುಪಿಯ ಮಥುರಾ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ತನಗೆ ಮನನೀಡಿ ಎಂದರು. ಈ ಸಂದರ್ಭದಲ್ಲಿ ಉಡುಪಿಯ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.










ಇದಕ್ಕೂ ಮುನ್ನ ಉಡುಪಿಯ ಆಭರಣ ಮೋಟಾರ್ಸ್ ಹಾಗು ಆಭರಣ ಡೈಮಂಡ್ಸ್'ನ ಕಾರ್ಮಿಕರನ್ನು ಭೇಟಿಯಾಗಿ ಮತಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ  ಪ್ರಸಾದ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಮುರುಳಿ ಶೆಟ್ಟಿ, ಗಫೂರ್, ಪ್ರಕ್ಯತ್  ಶೆಟ್ಟಿ ಹಾಗೂ ಇತರ  ಕಾಂಗ್ರೆಸ್ಸಿನ  ನಾಯಕರು ಕಾರ್ಯಕರ್ತರು ಜೊತೆಯಾದರು.

ಇದೆ ವೇಳೆ ಉಡುಪಿಯ  ಬಾಳಿಗ ಫಿಶ್   ನೆಟ್ಸ್ ಸೆಂಟರ್  ಕಾರ್ಮಿಕರನ್ನು   ಭೇಟಿಯಾಗಿ  ಮತಯಾಚನೆ ಮಾಡಲಾಯಿತು. ಉಡುಪಿಯ ಆದರ್ಶ ಆಸ್ಪತ್ರೆಯ  ಕಾರ್ಮಿಕರನ್ನು   ಭೇಟಿಯಾಗಿ  ಮತಯಾಚನೆ ಮಾಡಲಾಯಿತು.

ಉಡುಪಿಯ ಸಾಯಿರಾಧ ಟಿ.ವಿ.ಎಸ್ ಶೋ ರೂಂ &  ಸಾಯಿರಾಧ  ಮೆಡಿಕಲ್ ನ ಕಾರ್ಮಿಕರನ್ನು ಭೇಟಿಯಾಗಿ ಹೆಗ್ಡೆ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಕಿಶನ್ ಹೆಗ್ಡೆ, ಕೃಷ್ಣಮೂರ್ತಿ ಪ್ರಕ್ಯತ್ ಶೆಟ್ಟಿ ರವರು ಹಾಗೂ ಇತರ  ಕಾಂಗ್ರೆಸ್ಸಿನ  ನಾಯಕರು ಕಾರ್ಯಕರ್ತರು ಸಾಥ್ ನೀಡಿದರು.

Ads on article

Advertise in articles 1

advertising articles 2

Advertise under the article