ನೇಹಾ ಹತ್ಯೆ ಖಂಡಿಸಿ ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ಶೃದ್ದಾಂಜಲಿ
ಉಡುಪಿ: ನೇಹಾ ಹತ್ಯೆ ಖಂಡಿಸಿ ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ಮತ್ತು ಶೃದ್ದಾಂಜಲಿ ಕಾರ್ಯ ನಡೆಯಿತು.
ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಅಮಾನುಷ ಹತ್ಯೆಗೆ ಫಯಾಜ್ ನೇರ ಹೊಣೆ ಎಂಬುದು ಜಗಜ್ಜಾಹೀರಾಗಿದ್ದರೂ ಕಾಂಗ್ರೆಸ್ ಸರಕಾರ ಕೇವಲ ಒಂದು ಸಮುದಾಯವನ್ನು ಓಲೈಸಲು ಪ್ರಕರಣವನ್ನು ಹಗುರವಾಗಿ ಪರಿಗಣಿಸಿ, ಹತ್ಯೆಗೀಡಾದ ಹೆಣ್ಣು ಮಗಳ ಚಾರಿತ್ರ್ಯಹರಣ ಮಾಡಲು ಮುಂದಾಗಿರುವುದು ಅತ್ಯಂತ ಖಂಡನೀಯ. ಸರಕಾರ ಅಪರಾಧಿಯ ವಿರುದ್ಧ ಶೀಘ್ರ ಕಾನೂನಾತ್ಮಕ ಕ್ರಮವನ್ನು ಜರಗಿಸಿ ಅಪರಾಧಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಆಗ್ರಹಿಸಿದ್ದಾರೆ.
ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಅಶ್ವಿನಿ ಆರ್. ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ಮೊoಬತ್ತಿ ಉರಿಸಿ ನಡೆದ ಶೃದ್ಧಾಂಜಲಿ ಮತ್ತು ಪ್ರತಿಭಟನಾ ನಡೆಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ನಗರ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಸರೋಜ ಶಣೈ, ಶಾಂತಿ ಮನೋಜ್, ಉಪಾಧ್ಯಕ್ಷರುಗಳಾದ ಪೂರ್ಣಿಮಾ ಶೆಟ್ಟಿ, ಮಾಯಾ ಕಾಮತ್, ಯಶೋಧ ರಾಜ್, ಪ್ರಭಾ ರಾವ್, ವಿಧ್ಯಾ ಶಾಮ್ ಸುಂದರ್, ಪ್ರೀತಿ, ದೀಪಾ ಪೈ ಮತ್ತಿತರರು ಉಪಸ್ಥಿತರಿದ್ದರು.