ಮಣಿಪಾಲ ಟ್ಯಾಪ್ಮಿಯ 38ನೇ ಘಟಕೋತ್ಸವ: 510 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಮಣಿಪಾಲ: ಮಣಿಪಾಲದ ಮಾಹೆ ಅಧೀನದ ಟಿ.ಎ.ಪೈ ಮ್ಯಾನೇಜ್ ಮೆಂಟ್ ಇನ್ ಸ್ಟಿಟ್ಯೂಟ್ ಇದರ 38ನೇ ಘಟಕೋತ್ಸವ ಸಮಾರಂಭವು ಇತ್ತೀಚೆಗೆ ಜರುಗಿತು. 2022-24ನೇ ಸಾಲಿನ ಒಟ್ಟು 510 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಎಂಬಿಎ(ಕೋರ್) 364, ಎಂಬಿಎ ಇನ್ ಬ್ಯಾಂಕಿಂಗ್ ಆ್ಯಂಡ್ ಫೈನಾನ್ಸಿಯಲ್ ಸರ್ವೀಸಸ್ 52, ಎಂಬಿಎ ಇನ್ ಹ್ಯೂಮನ್ ರಿಸೋರ್ಸ್ ಮ್ಯಾನೇಜ್ ಮೆಂಟ್ 49, ಎಂಬಿಎ ಇನ್ ಮಾರ್ಕೆಟಿಂಗ್ 24 ಮತ್ತು ಎಂಬಿಎ ಇನ್ ಇಂಟರ್ ನ್ಯಾಶನಲ್ ಬಿಸಿನೆಸ್ ಕೋರ್ಸ್ಗಳ 21 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.
ಬ್ಲೂಮ್ ಬರ್ಗ್ ಎಲ್ಪಿ, ಸೌತ್ ಏಶ್ಯ, ಫೈನಾನ್ಶಿಯಲ್ ಪ್ರೊಡಕ್ಟ್ಸ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಮಿರ್ವಾನಿ ಪದವಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಸುದೀರ್ಘ ಸೇವಾ ಪ್ರಶಸ್ತಿ ಮತ್ತು ಸಂಶೋಧನಾ ಶ್ರೇಷ್ಠತೆಗಾಗಿ ಟಿಎಂಎ ಪೈ ಚಿನ್ನದ ಪದಕವನ್ನು ಡಾ.ಮಧು ವೀರ ರಾಘವನ್ ಅವರಿಗೆ ಪ್ರದಾನ ಮಾಡಲಾಯಿತು.
ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿ ಜಶ್ವಿನಿ ಎಚ್. ರೆಡ್ಡಿಗೆ ಮರಣೋತ್ತರವಾಗಿ ಪದವಿಯನ್ನು ಪ್ರದಾನ ಮಾಡಲಾಯಿತು. ಅವರ ಪರವಾಗಿ ಕುಟುಂಬದವರು ಪದವಿ ಸ್ವೀಕರಿಸಿದರು.
ಮಾಹೆಯ ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಮತ್ತು ಎಂ.ಎಲ್.ಎಚ್.ಎಸ್.ನ ಪ್ರೊ ವೈಸ್ ಚಾನ್ಸಲರ್ ಡಾ.ಮಧು ವೀರ ರಾಘವನ್ ಶುಭ ಹಾರೈಸಿದರು. ಟ್ಯಾಪ್ಮಿ ನಿರ್ದೇಶಕ ಡಾ.ರಾಜೀವ್ ಕುಮ್ರಾ ಸಂಸ್ಥೆಯ ವಾರ್ಷಿಕ ವರದಿಯನ್ನು ಮಂಡಿಸಿ, ಸ್ವಾಗತಿಸಿದರು.
ಸ್ಟ್ರಾಟೆಜಿ ಆ್ಯಂಡ್ ಪ್ಲಾನಿಂಗ್ ವಿಭಾಗದ ಡಾ.ಎನ್.ಎನ್.ಶರ್ಮಾ, ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ, ರಿಜಿಸ್ಟ್ರಾರ್ ಇನ್ ವ್ಯಾಲ್ಯೂವೇಷನ್ ಡಾ.ವಿನೋದ್ ಥಾಮಸ್ ಉಪಸ್ಥಿತರಿದ್ದರು.