ಉಡುಪಿ-ಚಿಕ್ಕಮಗಳೂರು ಕ್ಷೇತ್ರ: ಮಧ್ಯಾಹ್ನ 5ಗಂಟೆಗೆ ಶೇ. 72.13ರಷ್ಟು ಮತದಾನ
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 5ಗಂಟೆಯ ವೇಳೆ ಶೇ. 72.13 ರಷ್ಟು ಮತದಾನವಾಗಿದೆ.
ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 73.53, ಕಾಪುವಿನಲ್ಲಿ ಶೇ.74.50, ಕುಂದಾಪುರದಲ್ಲಿ ಶೇ.74.28, ಉಡುಪಿಯಲ್ಲಿ ಶೇ.72.52, ಚಿಕ್ಕಮಗಳೂರಿನಲ್ಲಿ ಶೇ. 66.13, ಮೂಡುಗೆರೆಯಲ್ಲಿ ಶೇ. 73.48, ಶೃಂಗೇರಿಯಲ್ಲಿ ಶೇ. 75.02 ಹಾಗೂ ತರೀಕೆರೆಯಲ್ಲಿ ಶೇ. 69.06ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ವೆಬ್ ಸೈಟ್ ನಿಂದ ತಿಳಿದುಬಂದಿದೆ.
ಕೊರ್ಗಿಯ ಗಿರಿಜಾ ಚಂದ್ರಶೇಖರ ಹೆಗ್ಡೆ ಸರಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಕುಟುಂಬ ಸಮೇತರಾಗಿ ಬಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ತಮ್ಮ ಹಕ್ಕು ಚಲಾಯಿಸಿದರು.
ಕೋಟ ಶ್ರೀನಿವಾಸ್ ಪೂಜಾರಿ ಕೋಟತಟ್ಟು ಗ್ರಾಮ ಪಂಚಾಯತ್ ನಲ್ಲಿರುವ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು.
ಕಳತ್ತೂರು ವಾರ್ಡಿನ ಪೈಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲಾ ಮತಗಟ್ಟೆ ಸಂಖ್ಯೆ 157ರಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತದಾನ ಮಾಡಿದರು. ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿ ಪ್ರಧಾನ ಕಾರ್ಯದರ್ಶಿ ಉಡುಪಿ ಶೇಕ್ ವಹಿದ್ ಅವರು ಬೀಡಿನಗುಡ್ಡೆಯ ಸೌತ್ ಸ್ಕೂಲಿನಲ್ಲಿ ಮತ ಚಲಾಯಿಸಿದರು.