ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಕೇವಲ 10 ವರ್ಷವಾಯಿತು; ದೇಶದಲ್ಲಿರುವುದು ಒಂದೇ ಪಕ್ಷ, ಮತ್ತೆಲ್ಲವೂ ಪಕ್ಷಪಾತ; ವಿಶ್ವಪ್ರಿಯತೀರ್ಥ ಸ್ವಾಮೀಜಿ
Friday, April 26, 2024
ಉಡುಪಿ: ಅದಮಾರು ಮಠಾಧೀಶರಾದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉಡುಪಿಯಲ್ಲಿ ಮತ ಚಲಾಯಿಸಿದ ಬಳಿಕ ನೀಡಿರುವ ಪ್ರತಿಕ್ರಿಯೆ ಗಮನ ಸೆಳೆದಿದೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 10 ವರ್ಷವಾಯಿತು. ಬ್ರಿಟಿಷರು ಭಾರತ ಬಿಟ್ಟು 75 ವರ್ಷವಾಯಿತು.ಇದೇ ರೀತಿಯಲ್ಲಿ ಭಾರತ ಸದೃಢವಾಗಿ ಮುಂದುವರಿಯಬೇಕು. ದೇಶದಲ್ಲಿರುವುದು ಒಂದೇ ಪಕ್ಷ, ಮತ್ತೆಲ್ಲವೂ ಪಕ್ಷಪಾತ. ಹಿಂದೂ ಆದವನು ಹಿಂದುತ್ವ ಉಳಿಸಲು ಮೋದಿಯನ್ನೇ ಆರಿಸಬೇಕು ಎಂದು ಹೇಳಿದ್ದಾರೆ.