ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ರಾಜ್ಯಕ್ಕೆ ಪ್ರಥಮ; 625/625ಕ್ಕೆ ಅಂಕ ಗಳಿಸಿದ ಸಾಧನೆ
ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಬಾಗಲಕೋಟೆ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು 625/625ಕ್ಕೆ ಅಂಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಯಾರಿಗೆಲ್ಲ ಎಷ್ಟು ಅಂಕ ಸಿಕ್ಕಿದೆ ನೋಡಿ...
• ಅಂಕಿತಾ ಬಸಪ್ಪ, ಬಾಗಲಕೋಟೆ- 625/625 ( ರಾಜ್ಯಕ್ಕೆ ಏಕೈಕ ಪ್ರಥಮ)
• ಹರ್ಷಿತಾ ಡಿಎಂ, ಮಧುಗಿರಿ- 624/625
• ಮೇದಾ ಪಿ.ಶೆಟ್ಟಿ, ಬೆಂಗಳೂರು- 624/625
• ಚಿನ್ಮಯ್, ದಕ್ಷಿಣ ಕನ್ನಡ- 624/625
• ಸಿದ್ದಾಂತ್, ಚಿಕ್ಕೋಡಿ – 624/625
• ದರ್ಶನ್, ಚಿನ್ಮಯ್,ಶ್ರೀರಾಮ್,ಶಿರಸಿ – 624/೬೨೫
ಯಾವ ಜಿಲ್ಲೆಗೆ ಎಷ್ಟು ಸ್ಥಾನ ....
ಉಡುಪಿ ಜಿಲ್ಲೆ ಪ್ರಥಮ ಸ್ಥಾನ – 94%
• ದಕ್ಷಿಣ ಕನ್ನಡ ಜಿಲ್ಲೆಗೆ ಎರಡನೇ ಸ್ಥಾನ 92.12% .
• ಶಿವಮೊಗ್ಗ ಜಿಲ್ಲೆಗೆ ಮೂರನೇ ಸ್ಥಾನ. 88.67%.
• ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ, 50.59%
• ಕೊಡಗು 88%,
• ಉತ್ತರ ಕನ್ನಡ 86%.
• ಹಾಸನ 86%
• ಮೈಸೂರು 85%,
• ಶಿರಸಿ 84%,
• ಬೆಂಗಳೂರು ಗ್ರಾ.83%
• ಚಿಕ್ಕಮಗಳೂರು 83%,
• ವಿಜಯಪುರ 79%
• ಬೆಂ.ದಕ್ಷಿಣ 79%,
• ಬೆಂಗಳೂರು ಉತ್ತರ 77%
ಫಲಿತಾಂಶದಲ್ಲಿ ಕುಸಿತ....
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿತ್ತು. ಹೀಗಾಗಿ ಫಲಿತಾಂಶದಲ್ಲಿ ಕುಸಿತ ಕಂಡಿದೆ. 2022-23ನೇ ಸಾಲಿನಲ್ಲಿ 83.89% ರಷ್ಟು ಫಲಿತಾಂಶ ದಾಖಲಾಗಿತ್ತು. ಆದರೆ ಈ ಬಾರಿ 73.40% ಫಲಿತಾಂಶ ಬಂದಿದೆ.
ಶೂನ್ಯ ಸಾಧನೆ ಶಾಲೆಗಳು...
ಸರ್ಕಾರಿ – 3
ಅನುದಾನ – 13
ಖಾಸಗಿ – 62
ಒಟ್ಟು – 78
100% ಫಲಿತಾಂಶ ವಿವರ
ಸರ್ಕಾರಿ – 785
ಅನುದಾನ – 206
ಖಾಸಗಿ ಶಾಲೆ – 1297
ಒಟ್ಟು – 2288
ಮೊಬೈಲ್‌ನಲ್ಲಿ ರಿಸಲ್ಟ್ ಚೆಕ್ ಮಾಡುವ ವಿಧಾನ
ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಕ್ರೋಮ್ ಅಪ್ಲಿಕೇಶನ್‌ಗೆ ಹೋಗಿ. ಸರ್ಚ್ ಬಾರ್‌ನಲ್ಲಿ https://karresults.nic.in ಎಂದು ಟೈಪಿಸಿ, ಎಂಟರ್ ಮಾಡಿ. ‘SSLC Exam 1 2024 Result’ ಗೆ ಸಂಬಂಧಿತ ಲಿಂಕ್ ಮೇಲೆ ಕ್ಲಿಕ್ ಮಾಡಿ. ತೆರೆದ ವೆಬ್‌ಪೇಜ್‌ನಲ್ಲಿ ನಿಮ್ಮ ರಿಜಿಸ್ಟರ್ / ರೋಲ್ ನಂಬರ್ ಟೈಪಿಸಿ. ನಂತರ ‘View’ ಎಂದಿರುವಲ್ಲಿ ಕ್ಲಿಕ್ ಮಾಡಿ. ರಿಸಲ್ಟ್ ಪ್ರದರ್ಶಿತವಾಗುತ್ತದೆ. ಚೆಕ್ ಮಾಡಿಕೊಳ್ಳಿ.