ಸಿಬಿಎಸ್ಸಿ 10ನೇ ತರಗತಿ ಫಲಿತಾಂಶ ಪ್ರಕಟ; ಕಾಪು ಚಂದ್ರನಗರದ ಕ್ರೆಸ್ಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್'ಗೆ 100% ಫಲಿತಾಂಶ; ಸಾಧನೆ ಮೆರೆದ ವಿದ್ಯಾರ್ಥಿಗಳು
ಕಾಪು: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕಾಪು ಚಂದ್ರನಗರದ ಕ್ರೆಸ್ಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ಈ ಬಾರಿಯ ಸಿಬಿಎಸ್ಸಿ(ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್)ಯ 2024 -25ನೇ ಸಾಲಿನ 10ನೇ ತರಗತಿಯ ಫಲಿತಾಂಶದಲ್ಲಿ ಶೇಕಡ 100% ಫಲಿತಾಂಶ ಸಾಧಿಸಿ ಸಾಧೆನೆ ಮೆರೆದಿದೆ.
ಈ ಬಾರಿ ಶಾಲೆಯ ವಿದ್ಯಾರ್ಥಿಗಳಾದ ನುಮಾನ್ ಅಬ್ದುಲ್ ಸಲಾಂ 444 ಅಂಕ ಗಳಿಸುವ ಮೂಲಕ ಶಾಲೆಗೇ ಪ್ರಥಮರಾಗಿದ್ದು, ಅಬ್ದುಲ್ ಅಹದ್ ಜಮಾಲ್ 426 ಅಂಕ ಗಳಿಸುವ ಮೂಲಕ ದ್ವಿತೀಯ ಹಾಗು ಕರಾಣಿ ಆಯಿಷಾ ಇಫ್ಹಂ 425 ಅಂಕಗಳಿಸುವ ಮೂಲಕ ತೃತೀಯೆಯ ಸ್ಥಾನ ಪಡೆದುಕೊಂಡು ಸಾಧನೆ ಮೆರೆದಿದ್ದಾರೆ.
ಸಂಸ್ಥೆಯ 35 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 3 ಮಂದಿ ಉನ್ನತ ದರ್ಜೆ, 19 ಮಂದಿ ಪ್ರಥಮ ದರ್ಜೆಯಲ್ಲಿ, 12 ಮಂದಿ ದ್ವಿತೀಯ ಗರ್ಜೆಯಲ್ಲಿ ಹಾಗು ಓರ್ವ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ರಾಂಕ್ ಪಡೆದ ಇತರ ವಿದ್ಯಾರ್ಥಿಗಳು....
4ನೇ ಸ್ಥಾನ- ಫಾತಿಮಾ ಅಥಹರುನ್ನಿಸ್ಸ-424 ಅಂಕ
5ನೇ ಸ್ಥಾನ-ಝಇನಬಾ ಅಷ್ಫಾನ- 423 ಅಂಕ
6ನೇ ಸ್ಥಾನ- ಝಇದ್ ಮೊಹಮ್ಮದ್ ಇಮ್ರಾನ್ - 421 ಅಂಕ
7ನೇ ಸ್ಥಾನ-ಇಂಶ ಮೆಹರ್ - 407 ಅಂಕ
8ನೇ ಸ್ಥಾನ-ಮೊಹಮ್ಮದ್ ಹಫೀಜ್ - 406 ಅಂಕ
9ನೇ ಸ್ಥಾನ-ಫಾತಿಮಾ ಹೈಫಾ - 403 ಅಂಕ
10ನೇ ಸ್ಥಾನ- ಶ್ರೀರಾಜ್ ಎ. ದೇವಾಡಿಗ - 396 ಅಂಕ
ಈ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಶಂಶುದ್ದೀನ್ ಯೂಸಫ್ ಸಾಹೇಬ್, ವ್ಯವಸ್ಥಾಪಕ ನಿರ್ದೇಶಕಿ ಶಹನಾಜ್ ಬೇಗಂ, ಉಪಾಧ್ಯಕ್ಷ ಆದಿಲ್ ಶಂಶುದ್ದೀನ್, ಶೈಕ್ಷಣಿಕ ಮತ್ತು ಆಡಳಿತ ನಿರ್ದೇಶಕ ಜಿ.ಎಸ್.ನವಾಬ್ ಹಸನ್, ಪ್ರಾಂಶುಪಾಲ ಅಕ್ಬರ್ ಅಲಿ ಹಾಗೂ ಶಾಲೆಯ ಶಿಕ್ಷಕವೃಂದ ಮಕ್ಕಳಿಗೆ ಹಾಗೂ ಪೋಷಕರಿಗೆ ಶುಭಾಶಯ ತಿಳಿಸಿದ್ದಾರೆ.