ಸೌದಿಯಲ್ಲಿ ಖಿದ್ಮಾ ಫೌಂಡೇಷನ್'ನಿಂದ ಹಗ್ಗಜಗ್ಗಾಟ ಸ್ಪರ್ಧೆ; ಟ್ರೋಫಿ ಗೆದ್ದ ಟೀಮ್ ಮಲಾಝ್
Wednesday, May 15, 2024
ಸೌದಿ ಅರೇಬಿಯಾ: ಸೌದಿ ಅರೇಬಿಯಾದ ಖಿದ್ಮಾ ಫೌಂಡೇಷನ್ ಕರ್ನಾಟಕ ವತಿಯಿಂದ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಟೀಮ್ ಮಲಾಝ್ (Team Malaz) ಪ್ರಥಮ ಸ್ಥಾನವನ್ನು ಗೆದ್ದು ಖಿದ್ಮಾ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಮೇ 9ರಂದು ಸೌದಿ ಅರೇಬಿಯಾದ ರೀಯಾದ್ ನಲ್ಲಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾದ ಬಲಿಷ್ಠ 10 ತಂಡಗಳು ಪಾಲ್ಗೊಂಡಿದ್ದು ಟೀಮ್ ಮಲಾಝ್ ತಂಡ ಎಲ್ಲಾ ತಂಡಗಳೊಂದಿಗೆ ಹೋರಾಡಿ ವಿಜಯವನ್ನು ಗಳಿಸಿದೆ. ಸೌದಿ ಅರೇಬಿಯಾದಲ್ಲಿ ಈ ವರ್ಷ ಸತತ ನಾಲ್ಕನೇ ಬಾರಿ ವಿಜಯವನ್ನು ತನ್ನದಾಗಿಸಿಕೊಂಡಿದೆ.