ಬಿಜೆಪಿಯೊಂದಿಗಿನ ಮೈತ್ರಿ ನನಗೆ ಮುಖ್ಯವಲ್ಲ ಎಂದ ಕುಮಾರಸ್ವಾಮಿ

ಬಿಜೆಪಿಯೊಂದಿಗಿನ ಮೈತ್ರಿ ನನಗೆ ಮುಖ್ಯವಲ್ಲ ಎಂದ ಕುಮಾರಸ್ವಾಮಿ

 

ರಾಯಚೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತೀವ್ರ ಪೇಚಿಗೆ ಸಿಲುಕಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಬಿಜೆಪಿಯೊಂದಿಗಿನ ಮೈತ್ರಿ ಉಳಿಸಿಕೊಳ್ಳುವ ಉತ್ಸಾಹ ಕಳೆದುಕೊಂಡಿದ್ದಾರೆ.

ರಾಯಚೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಅವರು, ಪ್ರಜ್ವಲ್ ರೇವಣ್ಣ 400 ಮಹಿಳೆಯರನ್ನು ರೇಪ್ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಅವರಿಗೆ ಈ ಮಾಹಿತಿ ಕೊಟ್ಟವರು ಯಾರು? ರಾಜ್ಯ ಸರ್ಕಾರ ಕೊಡ್ತಾ? ಈ ಕುರಿತು ಬೇಕಾಬಿಟ್ಟಿ ಹೇಳಿಕೆ ನೀಡಿರುವ ರಾಹುಲ್‌ಗೆ ಮೊದಲು ಎಸ್ಐಟಿಯಿಂದ ನೋಟಿಸ್‌ ಕೊಡಿಸಲಿ ಎಂದು ಸಿಎಂ ಸಿದ್ದರಾಮಯ್ಯಗೆ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.

ಈಗ ಬಿಡುಗಡೆಯಾಗಿರುವ ವಿಡಿಯೊಗಳಲ್ಲಿ ಪ್ರಜ್ವಲ್ ಮುಖ ಕಾಣುತ್ತಿಲ್ಲ. ಹಾಗಂತ ನಾನೇನು ಆ ವಿಡಿಯೊಗಳನ್ನು ನೋಡಿಲ್ಲ. ಇಷ್ಟಾದರೂ ಸಹಿಸಿಕೊಂಡಿದ್ದೇವೆ. ಕಾಂಗ್ರೆಸ್‌ನ ಮಹಾನಾಯಕ ತೋಟದಲ್ಲಿ‌ ಏನೇನಾಗಿದೆ? 6–7 ಜನರನ್ನು ಹೋಟೆಲ್‌ನಲ್ಲಿ ಇಟ್ಟೀದಿಯಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ನಂತರ ಪತ್ರಕರ್ತರೊಬ್ಬರು ಬಿಜೆಪಿ ಮೈತ್ರಿ ಏನಾಗಬಹುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ತನಗೆ ಮೈತ್ರಿ ಮುಖ್ಯ ಅಲ್ಲ. ಮುಂದೆ ನೋಡೋಣ ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article