ಪಡುಬಿದ್ರೆಯ ನೂತನ ಅಲ್ ಫಲಾಹ್ ಅಕಾಡಮಿ ಸ್ಕೂಲಿಗೆ ಭೇಟಿ ನೀಡಿ ಶುಭ ಹಾರೈಸಿದ ಯು.ಟಿ.ಖಾದರ್; ಶಾಲಾ ಸಂಸ್ಥಾಪಕ, ಅಧ್ಯಕ್ಷ ನಝೀರ್ ಹುಸೈನ್ ಅವರ ಕಾರ್ಯಸಾಧನೆಗೆ ಮೆಚ್ಚುಗೆ
ಪಡುಬಿದ್ರೆ: ಪಡುಬಿದ್ರೆಯ ಸರಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ ನೂತನವಾಗಿ ಆರಂಭವಾಗಿರುವ ಅಲ್ ಫಲಾಹ್ (AL-FALAH Smart-Ed Academy) ಅಕಾಡಮಿ ಸ್ಕೂಲ್(ಆಂಗ್ಲ ಮಾಧ್ಯಮ ಶಾಲೆ)ಗೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಭೇಟಿ ನೀಡಿ ಶುಭ ಹಾರೈಸಿದರು.
ಶಾಲೆಯಲ್ಲಿ ನೀಡಲಾಗುವ ಸ್ಮಾರ್ಟ್ ಎಜುಕೇಶನ್, ವಿನೂತನ ಮಾದರಿಯ ಕೊಠಡಿಗಳನ್ನು ಕಂಡು ಸಂತಸ ವ್ಯಕ್ತಪಡಿಸಿದ ಯು.ಟಿ.ಖಾದರ್ ಅವರು, ಸೌದಿಯಲ್ಲಿ ವ್ಯವಹಾರ ಮಾಡಿಕೊಂಡು ತನ್ನ ಸ್ವಂತ ಊರಿನಲ್ಲಿ ಇಂಥ ಹೈಟೆಕ್ ಮಾದರಿಯ ಶಾಲೆ ನಿರ್ಮಿಸಿರುವ ಶಾಲಾ ಸಂಸ್ಥಾಪಕ, ಅಧ್ಯಕ್ಷ ನಝೀರ್ ಹುಸೈನ್ ಅವರ ಕಾರ್ಯಸಾಧನೆಯನ್ನು ಮೆಚ್ಚಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯು.ಟಿ.ಖಾದರ್ ಅವರನ್ನು ನಝೀರ್ ಹುಸೈನ್ ಅವರು ಶಾಲು ಹೊದಿಸಿ ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಮುಖಂಡರಾದ ನವೀನ್ ಚಂದ್ರ ಶೆಟ್ಟಿ, ಅಜೀಜ್ ಹೆಜಮಾಡಿ, ಫಾರೂಕ್ ಚಂದ್ರನಗರ, ಪಂಚಾಯತ್ ಸದಸ್ಯರಾದ ರಮೀಝ್ ಹುಸೈನ್, ಮುಬೀನಾ, ಜೈೊತಿ ಮೆನನ್, ಅಝೀಜ್ ಪಡುಬಿದ್ರಿ ಹಾಗೂ ಕರುಣಾಕರ, ನೂರ್ ಮೊಹಮ್ಮದ್ ಸಂತೋಷ್, ಅಶೋಕ್, ಪೈಝಲ್, ಶೋಯಬ್ ಮುಂತಾದವರು ಜೊತೆಗಿದ್ದರು.