ದಕ್ಷಿಣಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೂ ಮತ ಗಳಿಕೆಯಲ್ಲಿ 1.25 ಲಕ್ಷ ಮತಗಳ ಇಳಿಕೆ!
ಮಂಗಳೂರು: ಬಿಜೆಪಿಯ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಗೆಲುವು ಸಾಧಿಸಿದ್ದು, ಅವರ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಆರ್ ಪದ್ಮರಾಜ್ ಸೋಲು ಕಂಡಿದ್ದಾರೆ.
ಆದರೆ ಈ ಬಾರಿ ಬ್ರಿಜೇಶ್ ಚೌಟ ಪಡೆದ ಮತ ಗಳಿಕೆಯಲ್ಲಿ ಇಳಿಮುಖ ಕಂಡಿದ್ದಾರೆ. 1991 ರಲ್ಲಿ ಧನಂಜಯಕುಮಾರ್ ಬಿಜೆಪಿಯಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಬಳಿಕದಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡದ್ದೇ ಇಲ್ಲ. 2024ರ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ 1,49,208 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಳಿನ್ ಕುಮಾರ್ ಕಟೀಲು ಅವರು 2.75 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಎದುರು ಗೆದ್ದು ಬೀಗಿದ್ದರು. ಆದರೆ ಈ ಬಾರಿ ಕಳೆದ ಬಾರಿಗಿಂತ ಮತಗಳ ಅಂತರ ಕಡಿಮೆಯಾಗಿದೆ. ಆದರೆ ಲಕ್ಷ ಮತಗಳ ಅಂತರದಿಂದ ಜಯ ದೊರಕಿದೆ.
ಕಾಂಗ್ರೆಸ್ ನಿಂದ ದ.ಕ.ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಪದ್ಮರಾಜ್ ಆರ್ ಪೂಜಾರಿಯವರು ಕಣದಲ್ಲಿದ್ದದ್ದು ಈ ಅಂತರಕ್ಕೆ ಕಾರಣ. ಪದ್ಮರಾಜ್ ಅಲ್ಲದೆ ಬೇರೆ ಅಭ್ಯರ್ಥಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರೆ, ಬಿಜೆಪಿಯ ಮತ ಗಳಿಕೆ ಇನ್ನೂ ಹೆಚ್ಚುತ್ತಿತ್ತು. ಪದ್ಮರಾಜ್ ಅವರ ವೈಯುಕ್ತಿಕ ಮತಗಳು ಬ್ರಿಜೇಶ್ ಚೌಟ ಅವರ ಮತಬೇಟೆಯ ನಾಗಲೋಟಕ್ಕೆ ಕೊಂಚ ಕಡಿವಾಣ ಹಾಕಿದೆ.