ನಿತೀಶ್ ಕುಮಾರ್'ಗಿಂತ ಉತ್ತಮ ಪ್ರಧಾನಿ ಯಾರಿದ್ದಾರೆ: ಜೆಡಿಯು ಪ್ರಶ್ನೆ
Wednesday, June 5, 2024
ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಶ್ಲಾಘಿಸಿರುವ ಜನತಾ ದಳ-ಯುನೈಟೆಡ್ (ಜೆಡಿಯು) ಎಂಎಲ್‌ಸಿ ಡಾ.ಖಾಲೀದ್ ಅನ್ವರ್ ಅವರು ನಿತೀಶ್ ಕುಮಾರ್ ಅವರಿಗಿಂತ ಉತ್ತಮ ಪ್ರಧಾನಿ ಯಾರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ನಿತೀಶ್ ಕುಮಾರ್ ಸಮಾಜ ಮತ್ತು ದೇಶವನ್ನು ಅರ್ಥಮಾಡಿಕೊಳ್ಳುವ ಅನುಭವಿ ರಾಜಕಾರಣಿ. ಅವರು ಎಲ್ಲಾ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಗೌರವಿಸುತ್ತಾರೆ, ನಾವು ಸದ್ಯ NDA ಮೈತ್ರಿಕೂಟದ ಭಾಗವಾಗಿದ್ದೇವೆ, ಆದರೆ ಹಿಂದೆ ಮತ್ತು ಇಂದು, ಜನರು ನಿತೀಶ್ ಕುಮಾರ್ ಪ್ರಧಾನಿಯಾಗಬೇಕೆಂದು ಬಯಸಿದ್ದರು. ಇಂದಿನ ಫಲಿತಾಂಶದ ನಂತರ ಜನರ ನಿರೀಕ್ಷೆ ಹೆಚ್ಚಿದೆ ಎಂದು ಖಾಲಿದ್ ಅನ್ವರ್ ಹೇಳಿದರು.
ನಿತೀಶ್ ಕುಮಾರ್ ಬಿಹಾರ ರಾಜ್ಯವನ್ನು ಅಭಿವೃದ್ಧಿ ಮಾಡಿದ ರೀತಿ, ಅವರು ಕೃಷಿ ಸಚಿವರಾಗಿದ್ದಾಗ ದೇಶಕ್ಕೆ ಮಾಡಿದ ಕೃಷಿ ಮಾರ್ಗಸೂಚಿಯನ್ನು ಇಂದಿಗೂ ಅನುಸರಿಸಲಾಗುತ್ತಿದೆ. ದೇಶದ ರೈಲ್ವೇ ಕ್ಷೇತ್ರಕ್ಕಾಗಿ ಅವರು ಮಾಡಿದ ಕೆಲಸಕ್ಕಾಗಿ ಅವರು ಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದ್ದಾರೆ.