ನಮ್ಮ ಪಕ್ಷದ ಕಾರ್ಯಕರ್ತರು, ನಾಯಕರು ನನ್ನ ಜೊತೆ ಒಳ್ಳೆಯ ರೀತಿಯಿಂದ ಇದ್ದಾರೆ: ಹೆಬ್ಬಾಳ್ಕರ್
Thursday, June 13, 2024
ಉಡುಪಿ: ನನ್ನ ವಿರುದ್ಧದ ಗೋ ಬ್ಯಾಕ್ ಅಭಿಯಾನದ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಪಕ್ಷದ ಕಾರ್ಯಕರ್ತರು ನಾಯಕರು ನನ್ನ ಜೊತೆ ಒಳ್ಳೆಯ ರೀತಿಯಿಂದ ಇದ್ದಾರೆ. ಸಮಯ ಸಿಕ್ಕಾಗ ನನ್ನ ಜವಾಬ್ದಾರಿಯನ್ನು ಚಾಚು ತಪ್ಪದೇ ಮಾಡುತ್ತಿದ್ದಾನೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ತಮ್ಮ ವಿರುದ್ಧದ ಗೋ ಬ್ಯಾಕ್ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಸಚಿವರು, ನನ್ನ ಮಗನೇ ಬೆಳಗಾವಿಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ. ಬೆಳಗಾವಿ ಲೋಕಸಭಾ ಕ್ಷೇತ್ರದ ಬಗ್ಗೆ ನನಗೆ ಜವಾಬ್ದಾರಿ ಕೊಟ್ಟಿದ್ದರು. ಕೆ.ಜೆ. ಜಾರ್ಜ್ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದರು ಎಂದರು