ಕುವೈತ್ ಬೆಂಕಿ ಅವಘಡ; ಸಾವನ್ನಪ್ಪಿದ 45 ಭಾರತೀಯರ ಪಾರ್ಥಿವ ಶರೀರ ಭಾರತೀಯ ವಾಯುಪಡೆ ವಿಮಾನದ ಮೂಲಕ ಸ್ವದೇಶಕ್ಕೆ
ಅಬುಧಾಬಿ: ಕುವೈತ್ ಮಂಗಾಫ್‌ನಲ್ಲಿ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ 45 ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯುಪಡೆ(IAF) ವಿಮಾನ ಶುಕ್ರವಾರ ಬೆಳಗ್ಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಭಾರತೀಯ ವಾಯುಪಡೆಯ ವಿಶೇಷ ವಿಮಾನ ಸಿ-130ಜೆ ಶುಕ್ರವಾರ ಮುಂಜಾನೆ ಕೊಚ್ಚಿಗೆ ಪ್ರಯಾಣ ಬೆಳೆಸಿತು. ನಿನ್ನೆ ಗುರುವಾರ ಕುವೈತ್‌ಗೆ ಆಗಮಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಕುವೈತ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ಮೃತದೇಹಗಳನ್ನು ತವರೂರಿಗೆ ಕರೆತರಲು ಕ್ರಮ ಕೈಗೊಂಡಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಭಾರತೀಯ ವಾಯುಪಡೆಯ ವಿಶೇಷ ವಿಮಾನ ಸಿ-130ಜೆ ಶುಕ್ರವಾರ ಮುಂಜಾನೆ ಕೊಚ್ಚಿಗೆ ಪ್ರಯಾಣ ಬೆಳೆಸಿದೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
45 ಮಂದಿ ಮೃತರಲ್ಲಿ 31 ಮೃತದೇಹಗಳನ್ನು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತರಲಾಗಿದ್ದು, ನಂತರ ವಿಮಾನವು ಉಳಿದ ಮೃತದೇಹಗಳನ್ನು ಹೊತ್ತು ದೆಹಲಿಗೆ ತೆರಳಲಿದೆ ಎಂದು ತಿಳಿದುಬಂದಿದೆ. ತಮಿಳುನಾಡಿನಿಂದ 7 ಮಂದಿ ಮತ್ತು ಕರ್ನಾಟಕದ ಒಬ್ಬರ ಮೃತದೇಹಗಳನ್ನು ಕೊಚ್ಚಿಗೆ ತರಲಾಗಿದೆ.
ದಕ್ಷಿಣ ಭಾರತೀಯರಲ್ಲದೆ, ಉತ್ತರ ಪ್ರದೇಶದ ಮೂವರು, ಒಡಿಶಾದ ಇಬ್ಬರು ಮತ್ತು ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಹರಿಯಾಣದಿಂದ ತಲಾ ಒಬ್ಬರು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದು, ಅವರ ಮೃತದೇಹಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಗುತ್ತಿದೆ. .
ಭಾರತೀಯ ವಾಯುಪಡೆಯ ವಿಶೇಷ ವಿಮಾನ ಸಿ-130ಜೆ ಶುಕ್ರವಾರ ಮುಂಜಾನೆ ಕೊಚ್ಚಿಗೆ ಪ್ರಯಾಣ ಬೆಳೆಸಿದೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಕಟ್ಟಡದ ಬೆಂಕಿ ದುರಂತದಲ್ಲಿ ಪ್ರಾಣ ಕಳೆದುಕೊಂಡ ಕೇರಳಿಗರು:
1. ಪತ್ತನಂತಿಟ್ಟದ ಪಂದಳಂನ ಆಕಾಶ್ ನಾಯರ್
2. ಪತ್ತನಂತಿಟ್ಟದ ವಜಮುತ್ತಂನ ಮುರಳೀಧರನ್ ನಾಯರ್
3. ಪತ್ತನಂತಿಟ್ಟದ ಕೊನ್ನಿಯ ಸಾಜು ವರ್ಗೀಸ್
4. ಪತ್ತನಂತಿಟ್ಟದ ಕೀಜ್ವೈಪುರದ ಸಿಬಿನ್ ಅಬ್ರಹಾಂ
5. ಪತ್ತನಂತಿಟ್ಟದ ತಿರುವಲ್ಲಾದ ಥಾಮಸ್ ಉಮ್ಮನ್
6. ಕೊಲ್ಲಂನ ಕರವಲೂರಿನ ಸಜನ್ ಜಾರ್ಜ್
7. ಕೊಲ್ಲಂನ ವಯ್ಯಂಕರ ಶಮೀರ್ ಉಮರುದ್ದೀನ್
8. ಕೊಲ್ಲಂನ ವೆಲಿಚಿಕ್ಕಲದ ಲೂಕೋಸ್ ವಡಕ್ಕೊಟ್ಟು
9. ಕೊಲ್ಲಂನ ಪೆರಿನಾಡಿನ ಸುಮೇಶ್ ಪಿಳ್ಳೈ
10. ಕಣ್ಣೂರಿನ ಧರ್ಮದೊಳದ ವಿಶ್ವಾಸ್ ಕೃಷ್ಣ
11. ಕಣ್ಣೂರಿನ ಕಡಲಾಯಿಯ ಅನೀಶ್ ಕುಮಾರ್
12. ಕಣ್ಣೂರಿನ ಪಡಿಯೋಚ್ಚಲ್‌ನ ನಿತಿನ್ ಕೂತೂರ್
13. ಕೊಟ್ಟಾಯಂನ ಚಂಗನಾಶ್ಸೆರಿಯ ಶ್ರೀಹರಿ ಪ್ರದೀಪ್
14. ಕೊಟ್ಟಾಯಂನ ಪಂಪಾಡಿಯ ಸ್ಟೆಫಿನ್ ಅಬ್ರಹಾಂ
15. ಕೊಟ್ಟಾಯಂನ ಪೈಪ್ಪಾಡ್‌ನ ಶಿಬು ವರ್ಗೀಸ್
16. ಮಲಪ್ಪುರಂನ ಕೂಟ್ಟಾಯಿಯ ನೂಹು ಕೆ ಪಿ
17. ಮಲಪ್ಪುರಂನ ಪುಲಮಂತೋಲ್‌ನ ಎಂ ಪಿ ಬಾಹುಲೇಯನ್
18. ತಿರುವನಂತಪುರದ ನೆಡುಮಂಗಡದ ಅರುಣ್ ಬಾಬು
19. ತಿರುವನಂತಪುರದ ಎಡವದ ಶ್ರೀಜೇಶ್ ನಾಯರ್
20. ಕಾಸರಗೋಡಿನ ತೃಕ್ಕರಿಪುರದ ಕೇಲು ಪೊನ್ಮಲೇರಿ
21. ಕಾಸರಗೋಡಿನ ಚೆರ್ಕಳದ ರೆಂಜಿತ್ ಕೆ ಆರ್
22. ತ್ರಿಶೂರ್‌ನ ಚಾವಕ್ಕಾಡ್‌ನ ಬಿನೋಯ್ ಥಾಮಸ್
23. ಅಲಪ್ಪುಳದ ಚೆಂಗನ್ನೂರಿನ ಮ್ಯಾಥ್ಯೂ ಜಾರ್ಜ್
ಮೃತ ತಮಿಳರು
1. ರಾಮನಾಥಪುರದ ಎಟ್ಟಿವಾಯಲ್‌ನ ರಾಮು ಕರುಪ್ಪಣ್ಣನ್
2. ವಿಲ್ಲುಪುರಂನ ತಿಂಡಿವನಂನ ಮೊಹಮ್ಮದ್ ಶರೀಫ್
3. ತಂಜಾವೂರಿನ ಪೆರವೂರಾನಿಯ ಭುನಾಫ್ ರಿಚರ್ಡ್ ರೇ
4. ಚೆನ್ನೈನ ರಾಯಪುರಂನ ಜಿ ಶಿವಶಂಕರ್
5. ಕಡಲೂರಿನ ಮುತ್ತಂನ ಕೆ ಚಿನ್ನಧುರೈ
6. ತೂತುಕುಡಿಯ ವನರಮುಟ್ಟಿಯ ವಿ ಮರಿಯಪ್ಪನ್
7. ತಿರುಚ್ಚಿಯ ಇ ರಾಜು
ಆಂಧ್ರಪ್ರದೇಶ ಸಂತ್ರಸ್ತರು
1. ಶ್ರೀಕಾಕುಳಂನ ಸೋಂಪೇಟದಿಂದ ತಮದ ಲೋಕನಾಧಂ
2. ಪಶ್ಚಿಮ ಗೋದಾವರಿ ಖಂಡವಳ್ಳಿ ಗ್ರಾಮದ ಮೊಲ್ಲೇಟಿ ಸತ್ಯನಾರಾಯಣ
3. ಪಶ್ಚಿಮ ಗೋದಾವರಿ ಅಣ್ಣಾವರಪ್ಪಾಡು ಗ್ರಾಮದ ಮೀಸಲ ಈಶ್ವರಡು