ಹೆಮ್ಮೆಯ ದುಬೈ ಕನ್ನಡ ಸಂಘದ ನೂತನ ಅಧ್ಯಕ್ಷರಾಗಿ ಹಾದಿಯ ಮಂಡ್ಯ, ಪ್ರಧಾನ ಕಾರ್ಯದರ್ಶಿಯಾಗಿ ವರದರಾಜ್ ಕೋಲಾರ ಆಯ್ಕೆ

ಹೆಮ್ಮೆಯ ದುಬೈ ಕನ್ನಡ ಸಂಘದ ನೂತನ ಅಧ್ಯಕ್ಷರಾಗಿ ಹಾದಿಯ ಮಂಡ್ಯ, ಪ್ರಧಾನ ಕಾರ್ಯದರ್ಶಿಯಾಗಿ ವರದರಾಜ್ ಕೋಲಾರ ಆಯ್ಕೆ

ಅಬುಧಾಬಿ: ಯುಎಇಯ ಹೆಮ್ಮೆಯ ದುಬೈ ಕನ್ನಡ ಸಂಘದ 2024-25ನೇ ಸಾಲಿನ ಅಧ್ಯಕ್ಷರಾಗಿ ಹಾದಿಯ ಮಂಡ್ಯ ಅವರು ನೇಮಕಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ವರದರಾಜ್ ಕೋಲಾರ  ನೇಮಕಗೊಂಡರು, ಇವರು ಕಳೆದ ಹಲವು ವರ್ಷಗಳಿಂದ ಸಂಘದಲ್ಲಿದ್ದು ಸಂಘದ ವತಿಯಿಂದ ನಡೆಯುವ ಅನೇಕ ಕಾರ್ಯಕ್ರಮಗಳಿಗೆ ಬಹಳ ಶ್ರಮ ವಹಿಸಿದ್ದಾರೆ.  

ಸಂಯುಕ್ತ ಅರಬ್ ಸಂಸ್ಥಾನದ ಅನಿವಾಸಿ ಕನ್ನಡಿಗರೆಲ್ಲರನ್ನು ಪ್ರತಿನಿಧಿಸಿ ದುಬೈ ಕೇಂದ್ರವಾಗಿ ಕಳೆದ ಒಂಬತ್ತು ವರ್ಷಗಳಿಂದ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮತ್ತು ಕ್ರೀಡಾ ವಿಭಾಗದಲ್ಲಿ ಹೆಮ್ಮೆಯ ದುಬೈ ಕನ್ನಡ ಸಂಘ ಕಾರ್ಯಾಚರಿಸುತ್ತಿದೆ.

ಕಳೆದ ವರ್ಷದ ಅಧ್ಯಕ್ಷರಾದ ಮಧು ದಾವಣಗೆರೆ ಅವರಿಂದ ವಾರ್ಷಿಕ ಸಭೆಯಲ್ಲಿ ಸಂಘದ ಧ್ವಜ ಹಸ್ತಾಂತರ ಮೂಲಕ ಅಧಿಕಾರ ಸ್ವೀಕರಿಸಿದರು. ಸಭೆಯಲ್ಲಿ ಕಳೆದ ವರ್ಷದ ಕಾರ್ಯಕ್ರಮಗಳ ಒಳಿತು ಕೆಡುಕು ಬಗ್ಗೆ ವಿಶ್ಲೇಷಿಸಲಾಯಿತು, ಕಳೆದ ವರ್ಷಗಳ ಖರ್ಚುವೆಚ್ಚದ ಮಾಹಿತಿ ಪಡೆಯೆಲಾಯಿತು ಹಾಗೆ ಮುಂದಿನ ದಿನಗಳಲ್ಲಿ ಸಂಘದ ಕಾರ್ಯಚಟುವಟಿಕೆ ರೂಪುರೇಷಗಳ ಬಗ್ಗೆ ಚರ್ಚಿಸಲಾಯಿತು ಮತ್ತು ಸಂಘದ ಸಮಿತಿಗೆ ನೂತನ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಸಂಘದ 2024-25ನೇ ಸಾಲಿನ ಪದಾಧಿಕಾರಿಗಳ ವಿವರ

ಹಾದಿಯ ಮಂಡ್ಯ - ಅಧ್ಯಕ್ಷರು 

ವರದರಾಜ್ ಕೋಲಾರ - ಪ್ರ.ಕಾರ್ಯದರ್ಶಿ 

ಸುದೀಪ್ ದಾವಣಗೆರೆ  - ಮಾಜಿ ಅಧ್ಯಕ್ಷರು 

ಮಮತಾ ಮೈಸೂರು - ಮಾಜಿ ಅಧ್ಯಕ್ಷರು 

ಮಧು ದಾವಣಗೆರೆ - ಮಾಜಿ ಅಧ್ಯಕ್ಷರು 

ರಫೀಕಲಿ ಕೊಡಗು - ಉದ್ಯೋಗ ಸಹಾಯ ವಿಭಾಗ 

ಪಲ್ಲವಿ ದಾವಣಗೆರೆ - ಮಹಿಳಾ ಘಟಕ 

ಅನಿತಾ ಬೆಂಗಳೂರು - ಮಕ್ಕಳ ಘಟಕ 

ಡಾ.ಸವಿತಾ ಮೈಸೂರು - ಆರೋಗ್ಯ ವಿಭಾಗ  

ವಿಷ್ಣುಮೂರ್ತಿ ಮೈಸೂರು - ಸಾಹಿತ್ಯ ಘಟಕ 

ಅಕ್ರಮ್ ಕೊಡಗು - ವ್ಯವಹಾರ ಘಟಕ 

ಶಂಕರ್ ಬೆಳಗಾವಿ - ಸಹಾಯ ಹಸ್ತ ವಿಭಾಗ  

ಮೊಹಿನುದ್ದೀನ್ ಹುಬ್ಬಳ್ಳಿ - ಕ್ರೀಡಾ ವಿಭಾಗ

ಸಮಿತಿ ಸದಸ್ಯರುಗಳು 

ಅಬ್ದುಲ್ ಹಾದಿ ಕುಂದಾಪುರ 

ನಝೀರ ಮಂಡ್ಯ 

ಪ್ರತಾಪ್ ಮಡಿಕೇರಿ 

ಚೇತನ್ ಬೆಂಗಳೂರು 

ಸ್ವಾತಿ ಚಿತ್ರದುರ್ಗ 

ರಜನಿ ಬೆಂಗಳೂರು

Ads on article

Advertise in articles 1

advertising articles 2

Advertise under the article