ಇಂದು ನಡೆಯುವ 'ಟಿ-20 ವಿಶ್ವಕಪ್'ನಲ್ಲಿ ಪಾಕಿಸ್ತಾನವನ್ನು ಎದುರಿಸಲಿರುವ ಭಾರತ; ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭ

ಇಂದು ನಡೆಯುವ 'ಟಿ-20 ವಿಶ್ವಕಪ್'ನಲ್ಲಿ ಪಾಕಿಸ್ತಾನವನ್ನು ಎದುರಿಸಲಿರುವ ಭಾರತ; ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭ

ನ್ಯೂಯಾರ್ಕ್:  ಅಮೆರಿಕದ ನ್ಯೂಯಾರ್ಕ್'ನಲ್ಲಿರುವ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ರಾತ್ರಿ ಟಿ-20 ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರಾದಾಯಿಕ ಎದುರಾಳಿಗಳಾದ ಭಾರತ- ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಗ್ರೂಪ್ ಎನಲ್ಲಿ ನಡೆಯಲಿರುವ 19 ನೇ ಪಂದ್ಯ ಇದಾಗಿದ್ದು, ಈಗಾಗಲೇ ಪಾಕ್ ವಿರುದ್ಧ ಗೆದ್ದಿರುವ ಅಮೆರಿಕಾ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಐರ್ಲೆಂಡ್ ವಿರುದ್ಧ ಗೆದ್ದಿರುವ ಭಾರತ ಉತ್ತಮ ಪ್ರದರ್ಶನ ತೋರುತ್ತಿದ್ದರೆ, ಅಮೆರಿಕ ವಿರುದ್ಧ ಸೋತಿರುವ ಪಾಕಿಸ್ತಾನ ತಂಡದಲ್ಲಿ ನಿರಾಸೆಯಲ್ಲಿದ್ದು, ಇಂದಿನ ಪಂದ್ಯದಲ್ಲಿ ಭಾರತವನ್ನು ಸೋಲಿಸುವ ನಿಟ್ಟಿನಲ್ಲಿ ತಯಾರಿ ನಡೆಸಿದೆ.

ಮೈದಾನದ ಪಿಚ್ ಕುರಿತು ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ನ್ಯೂಯಾರ್ಕ್ ನಮ್ಮ ತವರು ನೆಲ ಅಲ್ಲ. ನಾವು ಇಲ್ಲಿ ಎರಡು ಪಂದ್ಯಗಳನ್ನು ಆಡಿದ್ದರೂ, ಅದರ ಗುಣಲಕ್ಷಣಗಳ ಬಗ್ಗೆ ಹೆಚ್ಚಾಗಿ ತಿಳಿಯುತ್ತಿಲ್ಲ. ಇದು ದಿನದಿಂದ ದಿನಕ್ಕೆ ಬದಲಾಗುತ್ತದೆ, ಕ್ಯುರೇಟರ್ ಕೂಡ ಗೊಂದಲಕ್ಕೊಳಗಾಗುತ್ತಾರೆ ಎಂದು ಹೇಳಿದ್ದಾರೆ.

ಈ ಮಧ್ಯೆ ಪಂದ್ಯಕ್ಕೆ ಉಗ್ರರ ಭೀತಿ ಎದುರಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಎಲ್ಲಾ ರೀತಿಯ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ನಸ್ಸೌ ಕೌಂಟಿಯ ಕಾರ್ಯನಿರ್ವಾಹಕ ಬ್ರೂಸ್ ಬ್ಲೇಕ್‌ಮ್ಯಾನ್ ಹೇಳಿದ್ದಾರೆ. ಇದರಲ್ಲಿ ಯಾವುದೂ ನಿರೀಕ್ಷಿತವಲ್ಲ. ಪ್ರತಿ ಬಾರಿ ಇಂತಹ ಟೂರ್ನಿ ನಡೆದಾಗ ಗಮನ ಸೆಳೆಯಲು ಬೆದರಿಕೆಯಂತಹ ಘಟನೆಗಳು ನಡೆಯುತ್ತಿವೆ. ಎಲ್ಲರನ್ನೂ ಸುರಕ್ಷಿತವಾಗಿಡಲು ಕ್ರಮ ಕೈಗೊಳ್ಳಲಾಗಿದೆ. 100ಕ್ಕೂ ಹೆಚ್ಚು ಗಸ್ತು ಪಡೆ ಹೊಂದಿದ್ದೇವೆ. ಹೊರಗಡೆ 250 ಕ್ಕೂ ಗಸ್ತುಪಡೆಗಳನ್ನು ನಿಯೋಜಿಸಲಾಗಿದ್ದು, ದೇವಾಲಯಗಳು, ಸಣ್ಣ ವ್ಯಾಪಾರಿ ಮಳಿಗಳು ಮತ್ತು ಮಾಲ್‌ಗಳು ಗುರಿಯಾಗದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪಂದ್ಯಕ್ಕೆ ಶೇ. 51 ರಷ್ಟು ಮಳೆ ಅಡ್ಡಿಯಾಗುವ ಸಾಧ್ಯತೆ ಬಗ್ಗೆಯೂ ಅಲ್ಲಿನ ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ಭಾರತ ತಂಡ ಇಂತಿದೆ: ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ(ನಾಯಕ) ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ.

ಪಾಕಿಸ್ತಾನ ತಂಡ ಇಂತಿದೆ: ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಬಾಬರ್ ಅಜಮ್(ಸಿ), ಇಫ್ತಿಕರ್ ಅಹ್ಮದ್, ಶಾಹೀನ್ ಶಾ ಆಫ್ರಿದಿ, ಇಮಾದ್ ವಾಸಿಮ್, ಹ್ಯಾರಿಸ್ ರೌಫ್, ಮೊಹಮ್ಮದ್ ಅಮೀರ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಉಸ್ಮಾನ್

Ads on article

Advertise in articles 1

advertising articles 2

Advertise under the article