ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC ) ಯುಎಇ ವತಿಯಿಂದ ಅಬ್ದುಲ್ಲಾ ಮದುಮೂಲೆಯವರಿಗೆ ಹೃದಯ ಸ್ಪರ್ಶೀ ವಿದಾಯ-ಸನ್ಮಾನ

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC ) ಯುಎಇ ವತಿಯಿಂದ ಅಬ್ದುಲ್ಲಾ ಮದುಮೂಲೆಯವರಿಗೆ ಹೃದಯ ಸ್ಪರ್ಶೀ ವಿದಾಯ-ಸನ್ಮಾನ

ದುಬೈ: ಯುಎಇಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮಾನವೀಯ ಸೇವಾ ರಂಗದಲ್ಲಿ ಜನಪ್ರಿಯರಾಗಿರುವ ಖ್ಯಾತ ಅನಿವಾಸಿ ಕನ್ನಡಿಗ ಜನಾಬ್ ಅಬ್ದುಲ್ಲಾ ಮದುಮೂಲೆಯವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ತನ್ನ ಹುಟ್ಟೂರಿಗೆ ತೆರಳುವ ಸಂದರ್ಭದಲ್ಲಿ ಅವರನ್ನು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯುಎಇ ವತಿಯಿಂದ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಅಬುಧಾಬಿಯ ಪ್ರತಿಷ್ಠಿತ ಝಎದ್ ಫೌಂಡೇಶನ್ ಇದರ ಸೀನಿಯರ್ ಫೈನಾನಾನ್ಸಿಯಲ್ ಕಂಟ್ರೋಲರ್ ಆಗಿ ಜವಾಬ್ದಾರಿಯುತ ಹುದ್ದೆಯಲ್ಲಿ ಬಹು ದೀರ್ಘ ಸಮಯ ಸೇವೆ ಮಾಡುವುದರ ಜೊತೆಗೆ UAEಯ ಹಲವಾರು ಸೇವಾ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಜನ ಸೇವೆ ಮಾಡುತ್ತಿದ್ದ ಅಬ್ದುಲ್ಲಾ ಮದುಮೂಲೆಯವರು ತನ್ನ ಹುಟ್ಟೂರಿನಲ್ಲಿಯೂ ಬಹು ಮುಖ ಜನೋಪಯೋಗಿ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದು, ತನ್ನ ಸರಳತೆ ಮತ್ತು ಸ್ನೇಹ ಪರತೆಯ ವ್ಯಕ್ತಿತ್ವದಿಂದ ಬಹಳ ಜನಾನುರಾಗಿಯಾದ ವ್ಯಕ್ತಿಯಾಗಿದ್ದಾರೆ. ಓರ್ವ ಪ್ರಖ್ಯಾತ ಚಾರ್ಟೆಡ್ ಅಕೌಂಟೆಂಟ್ ಮಾತ್ರವಲ್ಲದೆ ಹಲವಾರು ಪ್ರತಿಷ್ಠಿತ ಪಾಶ್ಚಿಮಾತ್ರ ವಿಶ್ವ ವಿದ್ಯಾನಿಲಯಗಳಿಂದ ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ಓರ್ವ ನುರಿತ ಮತ್ತು ಅನುಭವೀ ವ್ಯಕ್ತಿಯಾಗಿದ್ದಾರೆ ಅಬ್ದುಲ್ಲಾ ಮದುಮೂಲೆಯವರು.

ಅಧ್ಯಕ್ಷ ಎಂ.ಇ. ಮೂಳೂರು ಅವರು ಅಬ್ದುಲ್ಲಾ ಮದುಮೂಲೆಯವರಿಗೂ DKSC ಗೂ ಇರುವ ಭಾಂಧವ್ಯ ಮತ್ತು DIKSCಯ ಜನಸೇವಾ ಕಾರ್ಯಗಳಲ್ಲಿ ಅವರು ಮಾಡುತ್ತಿರುವ ಸಹಾಯ ಸಹಕಾರಗಳ ಬಗ್ಗೆ ಉಲ್ಲೇಖಿಸುತ್ತಾ ಇನ್ನು ಮುಂದಕ್ಕೂ, ಈ ಮಾನವೀಯ ನೆಲೆಗಟ್ಟಿನ ಭಾಂಧವ್ಯ ಇನ್ನಷ್ಟು ಗಾಢವಾಗಿ DKSC ಯ ಮುಂದಿನ ಕಾರ್ಯಗಳಲ್ಲಿ ಮದುಮೂಲೆಯವರು ತಮ್ಮನ್ನು ತೊಡಗಿಸಿಕೊಂಡು ಸಹಕರಿಸ ಬೇಕೆಂದು ಕೋರಿದರು. ಸಮಾಜ ಸೇವೆ. ಸಾಮಾಜಿಕ ಜವಾಬುದಾರಿ ಎಂದರೆ ಏನು ಎಂಬುದಕ್ಕೆ ಮದುಮೂಲೆಯವರು ಅತೀ ಉತ್ತಮ ಮಾದರಿ ಎಂದರು.

DKSCಯ ಪೂರ್ವಾಧ್ಯಕ್ಷರೂ ಪ್ರಸ್ತುತ ಗೌರವ ಸಲಹೆಗಾರರೂ ಆಗಿರುವ ಮೊಹಿದಿನ್ ಕುಟ್ಟಿ ಕಕ್ಕಿಂಜೆಯವರು ಮದುಮೂಲೆಯವರ ಈ ಉತ್ತಮ ಸೇವಾ ತತ್ಪರತೆಯಿಂದ ಕೂಡಿದ ಜೀವನವು ಅವರನ್ನು ಇಹದಲ್ಲೂ ಪರದಲ್ಲೂ ಸುಖ ಶಾಂತಿ ತಂದು ಕೊಡಲಿ ಎಂದು ಹಾರೈಸಿದರು. ಮದುಮೂಲೆ ಯವರನ್ನು ಈ ಸಂಧರ್ಭದಲ್ಲಿ DKSC ವತಿಯಿಂದ ಸ್ಮರಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.

DKSC - ಯುಎಇ ಯ ಪ್ರಧಾನ ಕಾರ್ಯದರ್ಶಿ ಯೂಸುಫ್ ಅರ್ಲಪದವುರವರು ಸೇರಿದ ಎಲ್ಲ DKSC ಸದಸ್ಯರನ್ನು ಸ್ವಾಗತಿಸಿದರು. DKSCಯ ಪರವಾಗಿ ಮದುಮೂಲೆಯವರಿಗೆ ಶುಭ ಕೋರಿದರು. ಮದುಮೂಲೆಯವರ ಸೇವಾ ನಿಷ್ಠತೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು.

DESC ಪದಾಧಿಕಾರಿಗಳಾದ ನವಾಜ್ ಕೋಟೆಕಾರ್, ಶುಕೂರ್ ಮನಿಲಾ, ಅಬುಧಾಬಿ DKSC ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article