ಪಡುಬಿದ್ರೆ ಸ್ವದೇಶ್ Smart-ED ಅಕಾಡೆಮಿ ಶಾಲೆಯಲ್ಲಿ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟ ರಫೀಕ್ ಮಾಸ್ಟರ್

ಪಡುಬಿದ್ರೆ ಸ್ವದೇಶ್ Smart-ED ಅಕಾಡೆಮಿ ಶಾಲೆಯಲ್ಲಿ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟ ರಫೀಕ್ ಮಾಸ್ಟರ್

ಪಡುಬಿದ್ರೆ: ಇಲ್ಲಿನ ಅಲ್ ಫಲಾಹ್ ಅಧೀನ ಸಂಸ್ಥೆಯಾದ ಸ್ವದೇಶ್ ಸ್ಮಾರ್ಟ್-ಈಡಿ ಅಕಾಡೆಮಿ(SWADESH Smart-ED Academy) ಶಾಲೆಯಲ್ಲಿ ಶಿಕ್ಷಕರಿಗೆ ವ್ಯಕ್ತಿತ್ವ ವಿಕಸನ, ಬೋಧನಾ ಕೌಶಲ್ಯದ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಶುಕ್ರವಾರ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.



ಶಿಕ್ಷಕರಿಗೆ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟ ಅಂತಾರಾಷ್ಟ್ರೀಯ  ಪ್ರೇರಣಾ ಭಾಷಣಗಾರ ಹಾಗು ತರಬೇತಿದಾರ ರಫೀಕ್ ಮಾಸ್ಟರ್, ಇಂದಿನ ತಾಂತ್ರಿಕ ಯುಗದಲ್ಲಿ ಶಿಕ್ಷಣಕ್ಷೇತ್ರವು ಪೈಪೋಟಿಯಿಂದ ಕೂಡಿದ್ದು ಶಿಕ್ಷಕರು ವಿದ್ಯಾರ್ಥಿಗಳಿಂದ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ  ವಿದ್ಯಾರ್ಥಿಸ್ನೇಹಿ ಶಿಕ್ಷಣ ಅತ್ಯಗತ್ಯ ಮತ್ತು ಈ ದಿಶೆಯತ್ತ ಶಿಕ್ಷಕರು ಸಂಯಮದಿಂದ ಸದಾ   ಕ್ರಿಯಾಶೀಲರಾಗಿರಬೇಕು ಎಂದು ಶಿಕ್ಷಕರಿಗೆ ಪ್ರಾಯೋಗಿಕವಾಗಿ ಉದಾಹರಣೆಗಳ ಮೂಲಕ ಸೂಕ್ತ ಮಾರ್ಗದರ್ಶನ ನೀಡಿದರು.

ಸ್ಥಳೀಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಸದುದ್ದೇಶದಿಂದ ಶಾಲಾ ಸಂಸ್ಥಾಪಕ, ಅಧ್ಯಕ್ಷ ನಝೀರ್ ಹುಸೈನ್ ಅವರು ಆರಂಭಿಸಿರುವ ಸ್ವದೇಶ್ ಸ್ಮಾರ್ಟ್-ಈಡಿ ಅಕಾಡೆಮಿ ಮತ್ತಷ್ಟು ಸಾಧನೆಯನ್ನು ಮಾಡಲಿ ಎಂದು ರಫೀಕ್ ಮಾಸ್ಟರ್ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಫೀಕ್ ಮಾಸ್ಟರ್ ಅವರನ್ನು ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. 

ಕಾರ್ಯಾಗಾರದಲ್ಲಿ ಶಿಕ್ಷಕಿಯರಾದ ಪ್ರಮೀಳಾ, ಅಶ್ವಿನಿ, ಆಯಿಷಾ ತಸ್ಮಿಯಾ, ಆಯಿಷಾ ಶೈಮಾ, ಶಬೀಹಾ, ಅಶ್ರಫ್, ಮಲೀಹಾ, ಶಾನನಾಜ್, ಮೇಲ್ವಿಚಾರಕ ನಿಸಾರ್ ಹಾಗು ನಿರ್ವಾಹಕಿ ಮೆಹನಾಜ್  ಭಾಗವಹಿಸಿದ್ದರು. ಶಿಕ್ಷಕಿ ಶಬ್ರೀನಾ ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ರುಮಾನ ನವಾಜ್ ವಂದಿಸಿದರು.

Ads on article

Advertise in articles 1

advertising articles 2

Advertise under the article