ಪಡುಬಿದ್ರಿ ಕೆಪಿಎಸ್ ಶಾಲೆಗೆ ಗೇಟ್ ನಿರ್ಮಿಸಿಕೊಟ್ಟ ಮಸೀದಿ ಸಮಿತಿ-ಅಲ್ ಫಲಾಹ್ ಸಂಸ್ಥೆ: ಚೆಕ್ ವಿತರಿಸಿದ ಅಲ್ ಫಲಾಹ್ ಸಂಸ್ಥೆ
ಪಡುಬಿದ್ರಿ: ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನಕ್ಕೆ ಸುಮಾರು ತೊಂಬತ್ತು ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಿದ ಪಡುಬಿದ್ರಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಹಾಗು ಅಲ್ ಫಲಾಹ್ ಸಂಸ್ಥೆಯ ವತಿಯಿಂದ ಗೇಟ್ ಅಳವಡಿಸಲಾಗಿದ್ದು, ಇತ್ತೀಚೆಗೆ ಉದ್ಘಾಟಿಸಲಾಯಿತು.
ಈ ಗೇಟ್ ನಿರ್ಮಾಣದ ಅರ್ಧ ವೆಚ್ಚವನ್ನು ಅಲ್ ಫಲಾಹ್ ಭರಿಸಿದ್ದು, ಅದರ ಚೆಕನ್ನು ಪಡುಬಿದ್ರಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಆಡಳಿತ ಕಮಿಟಿಯ ಅಧ್ಯಕ್ಷ ಹಾಜಿ ಪಿ.ಕೆ. ಮೊಯ್ದಿನ್ ಲಚ್ಚಿಲ್, ಉಪಾಧ್ಯಕ್ಷರು, ಜೊತೆ ಕಾರ್ಯದರ್ಶಿ ಅವರಿಗೆ ಅಲ್ ಫಲಾಹ್ ಸಂಸ್ಥೆಯ ವತಿಯಿಂದ ಅಂತಾರಾಷ್ಟ್ರೀಯ ಪ್ರೇರಣಾ ಭಾಷಣಗಾರ ಹಾಗು ತರಬೇತಿದಾರ ರಫೀಕ್ ಮಾಸ್ಟರ್ ಅವರು ಹಸ್ತಾಂತರಿಸಿದರು.
ಬಹಳ ವರ್ಷಗಳಿಂದ ಶಾಲೆಯ ಮೈದಾನಕ್ಕೆ ಗೇಟ್‌ಗಳಿಲ್ಲದೆ ವಾರದ ಸಂತೆಯಂದು ವಾಹನಗಳು ನಿಲುಗಡೆ ಮಾಡಲಾಗುತಿದ್ದು, ಇದರಿಂದ ಶಾಲಾ ಮಕ್ಕಳು ಮೈದಾನದಲ್ಲಿ ಆಟ ಆಡಲು, ನಡೆದಾಡಲು ಸಮಸ್ಯೆ ಆಗುತಿತ್ತು. ಈ ಬಗ್ಗೆ ಶಾಲೆಯ ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆವಿದ್ಯಾರ್ಥಿ ಸಂಘದ ಮನವಿಯ ಮೇರೆಗೆ ಪಡುಬಿದ್ರಿಯ ಮುಹಿಯುದ್ದೀನ್ ಜುಮ್ಮಾ ಮಸೀದಿ ಗೇಟ್-ಅಲ್ ಫಲಾಹ್ ಸಂಸ್ಥೆ ಸುಮಾರು 90ಸಾವಿರ ರೂ. ವಚ್ಚದಲ್ಲಿ ಸುಸಜ್ಜಿತ ಗೇಟ್ ನಿರ್ಮಿಸಿದೆ.