ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಆರ್ಭಟ; ಆರೆಂಜ್ ಅಲರ್ಟ್​ ಘೋಷಣೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಆರ್ಭಟ; ಆರೆಂಜ್ ಅಲರ್ಟ್​ ಘೋಷಣೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರವಿವಾರ ಸಂಜೆ ಮತ್ತೆ ಧಾರಾಕಾರ ಮಳೆಯಾಗಿದ್ದು, ನಗರದ ಬಹುತೇಕ ರಸ್ತೆಗಳು ಜಲಾವೃತ್ತವಾಗಿದ್ದು, ಮೆಟ್ರೋ ಹಳಿ ಮೇಲೆ ಮರ ಬಿದ್ದು ಇಂದಿರಾನಗರ ಮಾರ್ಗದಲ್ಲಿ ಸಂಚಾರ ಸ್ಥಗಿತವಾಗಿದೆ.

ಕೇರಳಕ್ಕೆ ಮುಂಗಾರು ಪ್ರವೇಶಿಸಿದ ಬೆನ್ನಲ್ಲೇ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಜೂನ್​ ತಿಂಗಳ ಮೊದಲ ದಿನದಿಂದಲೇ ಆರಂಭವಾದ ಮಳೆ 2ನೇ ದಿನವೂ ಮುಂದುವರೆದಿದೆ.

ರಾಜ್ಯ ಹವಾಮಾನ ಇಲಾಖೆಯಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರಕ್ಕೆ ಆರೆಂಜ್ ಅಲರ್ಟ್ (Orange Alert) ಘೋಷಣೆ ಮಾಡಲಾಗಿದೆ. ಇನ್ನು ನಗರದಲ್ಲಿ 69 ಮಿಲಿಮೀಟರ್​ ಮಳೆ ಪ್ರಮಾಣ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ನೈಋತ್ಯ ಮುಂಗಾರು ಪರಿಣಾಮ ಬೆಂಗಳೂರಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ. ಹೆಚ್ಎಎಲ್​​ ಏರ್​​ಪೋರ್ಟ್​ 9.2 ಮಿಲಿಮೀಟರ್​, ಎಲೆಕ್ಟ್ರಾನಿಕ್ ಸಿಟಿ 29 ಮಿ.ಮೀ., ಮಾದಾವರ 4.5 ಮಿ.ಮೀ ಸೋಂಪುರ(ಬೆಂಗಳೂರು ನಗರ) 5.5 ಮಿ.ಮೀ.​ ಮಳೆ ದಾಖಲಾಗಿದೆ ಎಂದು ಬೆಂಗಳೂರಿನ ಮಳೆ ಕುರಿತು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇಂದು ಕೂಡ ಮಳೆಯ ಅಬ್ಬರ ಮುಂದುವರೆದಿದ್ದು, ನಗರದ ಹಲವೆಡೆ ಗಾಳಿ ಸಹಿತ ಮಳೆ(Rain) ಶುರುವಾಗಿದೆ. ಮೆಜೆಸ್ಟಿಕ್​​, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ ಸೇರಿದಂತೆ ಭರ್ಜರಿ ಮಳೆಯಾಗುತ್ತಿದೆ. ಇದರಿಂದ ತಗ್ಗು ಪ್ರದೇಶದ ರಸ್ತೆಗಳು ಜಲಾವೃತವಾಗಿದೆ.

ಬೆಂಗಳೂರಿನ ಮೆಜೆಸ್ಟಿಕ್​​, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ವಿಧಾನಸೌಧ, ಟೌನ್​ಹಾಲ್​​, ಕೆ.ಆರ್​.ಮಾರ್ಕೆಟ್, ಚಾಮರಾಜಪೇಟೆ, ಕಾರ್ಪೊರೇಷನ್​​, ಶಿವಾಜಿನಗರ, ಯಲಹಂಕ ಸುತ್ತಮುತ್ತ ಭಾರಿ ಮಳೆಯಾಗಿದೆ. ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಜಲಾವೃತ್ತವಾಗಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ. ತಗ್ಗು ಪ್ರದೇಶದ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಮಳೆ ನೀರು ನುಗ್ಗಿದ ಪರಿಣಾಮ ಹಲವು ಮನೆಗಳಿಗೆ ನೀರು ನುಗ್ಗಿದೆ.

ಎಲ್ಲೆಲ್ಲಿ ಮಳೆ

ಮೆಜೆಸ್ಟಿಕ್​, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಶಿವಾಜಿನಗರ, ಜಯನಗರ, ಹೆಬ್ಬಾಳ, ಮಾಗಡಿ ರಸ್ತೆ, ಕೋರಮಂಗಲ, ಕೆ.ಆರ್​.ಪುರಂ, ವಿಧಾನಸೌಧ, ಟೌನ್​ಹಾಲ್​​, ಕೆ.ಆರ್​.ಮಾರ್ಕೆಟ್,​ ಕಾರ್ಪೊರೇಷನ್​​, ಶಿವಾಜಿನಗರ, ಜಯನಗರ, ಸದಾಶಿವನಗರ, ಹೆಬ್ಬಾಳ, ಯಲಹಂಕ, ವಿಜಯನಗರ, ಮೈಸೂರು ರಸ್ತೆ, ಕೆಂಗೇರಿ, ಮಾಗಡಿ ರಸ್ತೆ, ಮಡಿವಾಳ, ಕೋರಮಂಗಲ, ಹೊಸೂರು ರಸ್ತೆ, ಕೆ.ಆರ್​.ಪುರಂ ಸೇರಿದಂತೆ ಬೆಂಗಳೂರಿನ ಸುತ್ತಮುತ್ತಾ ಬಿರುಗಾಳಿ ಸಹಿತ ವರ್ಷಧಾರೆ ಆಗಿದೆ.

ಸಂಜೆಯಿಂದ ಶುರುವಾದ ಮಳೆಗೆ ಬೆಂಗಳೂರು ನಡುಗಿದೆ. ಯಾವ ರಸ್ತೆಗೆ ಕಾಲಿಟ್ಟರೂ ನೀರು ಪ್ರವಾಹದಂತೆ ಹರೀತಿತ್ತು. ಮಾರ್ಕೆಟ್, ಮೆಜೆಸ್ಟಿಕ್, ಕೆಪಿ ಅಗ್ರಹಾರ, ಶಾಂತಿನಗರ, ಜಯನಗರ, ರಾಜಾಜಿನಗರ, ಕೋರಮಂಗಲ, ಮಡಿವಾಳ, ಹೆಬ್ಬಾಳ ಸೇರಿದಂತೆ ಹಲವು ರಸ್ತೆಗಳಲ್ಲಿ 2-3 ಅಡಿಯಷ್ಟು ನೀರು ನಿಂತಿತ್ತು. ಇಡೀ ರಸ್ತೆಗಳೇ ಕೆರೆಗಳಾಗಿದ್ದವು. ಅಂಗಡಿ, ಮನೆಗಳಿಗೂ ಮೋರಿ ನೀರು ನುಗ್ಗಿದೆ.

ವರುಣಾರ್ಭಟಕ್ಕೆ ನಗರದ ಹಲವೆಡೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ವರುಣನ ಅಬ್ಬರಕ್ಕೆ ನೂರಕ್ಕೂ ಹೆಚ್ಚು ಮರಗಳು ಧರಶಾಹಿ ಆಗಿದ್ದು, ಬಿಬಿಎಂಪಿ ಕಂಟ್ರೋಲ್ ರೂಂಗೆ ದೂರುಗಳು ಬಂದಿವೆ. ಇಲ್ಲಿಯವರೆಗೆ ವಿವಿಧೆಡೆ 118 ಮರಗಳು, 128 ಕೊಂಬೆಗಳು ಧರಶಾಹಿಯಾಗಿದ್ದು, ಆ ಪೈಕಿ ಕೇವಲ 48 ಕಡೆ ಮಾತ್ರ ಮರಗಳ ತೆರವು ಕಾರ್ಯ ಮಾಡಲಾಗಿದೆ. ಮಳೆ ಮುಂದುವರಿದ ಹಿನ್ನೆಲೆ ಇನ್ನೂ ಹಲವೆಡೆ ಮರಗಳು ತೆರವು ಮಾಡಲಾಗಿಲ್ಲ.

Ads on article

Advertise in articles 1

advertising articles 2

Advertise under the article