ಅಮೇಠಿಯಲ್ಲಿ ಸ್ಮೃತಿ ಇರಾನಿಗೆ ಸೋಲಿನ ಭೀತಿ; ಗಾಂಧಿ ಕುಟುಂಬದ ಬಲಗೈ ಬಂಟ ಕಿಶೋರಿ ಲಾಲ್‌ ಶರ್ಮಾಗೆ ಭಾರೀ ಮುನ್ನಡೆ

ಅಮೇಠಿಯಲ್ಲಿ ಸ್ಮೃತಿ ಇರಾನಿಗೆ ಸೋಲಿನ ಭೀತಿ; ಗಾಂಧಿ ಕುಟುಂಬದ ಬಲಗೈ ಬಂಟ ಕಿಶೋರಿ ಲಾಲ್‌ ಶರ್ಮಾಗೆ ಭಾರೀ ಮುನ್ನಡೆ

ಮುಂಬೈ: ರಾಹುಲ್‌ ಗಾಂಧಿ ಕ್ಷೇತ್ರ ಅಮೇಠಿಯಲ್ಲಿ ಸ್ಮೃತಿ ಇರಾನಿಗೆ ಸೋಲಿನ ಭೀತಿ ಎದುರಾಗಿದೆ. ಗಾಂಧಿ ಕುಟುಂಬದ ಬಲಗೈ ಬಂಟ ಕಿಶೋರಿ ಲಾಲ್‌ ಶರ್ಮಾ ಇಲ್ಲಿ ಭಾರೀ ಮುನ್ನಡೆಯಲ್ಲಿದ್ದು, ಗೆಲುವಿನತ್ತ ಮುಖ ಮಾಡಿದ್ದಾರೆ.

ಕಿಶೋರಿ ಲಾಲ್‌ ಶರ್ಮಾ 2,09,510 ಮತ ಗಳಿಸಿದ್ದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ 57,911 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇರಾನಿ ಕೇವಲ 1,51,599 ಮತಗಳನ್ನು ಗಳಿಸಿದ್ದಾರೆ.

ತನ್ನ ಕೈತಪ್ಪಿದ್ದ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ಎಳೆದು ತರಲು ಕಾಂಗ್ರೆಸ್‌ ಕಿಶೋರಿ ಲಾಲ್‌ ಶರ್ಮಾರನ್ನು ಕಣಕ್ಕಿಳಿಸಿತ್ತು. ಶರ್ಮಾ ದೇಶದೆಲ್ಲೆಡೆ ಅಪರಿಚಿತರಾದರೂ, ರಾಯ್‌ಬರೇಲಿ ಹಾಗೂ ಅಮೇಠಿ ಎರಡೂ ಕ್ಷೇತ್ರಗಳಲ್ಲಿ ಚಿರಪರಿಚಿತರಾಗಿದ್ದರು. ಹೀಗಾಗಿ ಇವರಿಗೆ ಈ ಜವಾಬ್ದಾರಿ ನೀಡಿತ್ತು.

ಈ ಎರಡೂ ಕ್ಷೇತ್ರಗಳಿಂದ ಯಾವುದೇ ಗಾಂಧಿಗಳು ಆಯ್ಕೆಯಾದರೂ, ಕ್ಷೇತ್ರದ ಉಸ್ತುವಾರಿಯನ್ನು ಇದೇ ಕಿಶೋರಿ ಲಾಲ್‌ ಶರ್ಮಾ ನೋಡಿಕೊಳ್ಳುತ್ತಿದ್ದರು. ಇದೀಗ ಅವರೇ ಕ್ಷೇತ್ರವನ್ನೂ ಕಾಂಗ್ರೆಸ್‌ ತೆಕ್ಕೆಗೆ ಎಳೆದು ತರುವತ್ತ ಹೊರಟಿದ್ದಾರೆ.

ಅಮೇಠಿ ಅಭ್ಯರ್ಥಿಯಾಗಿ ತಮ್ಮ ಹೆಸರನ್ನು ಘೋಷಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶರ್ಮಾ, ನಾನು ಗಾಂಧಿಗಳ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದಿದ್ದಲ್ಲದೆ, "ನಾನೊಬ್ಬ ದುರ್ಬಲ ಅಭ್ಯರ್ಥಿ ಎಂದು ನಾನು ಭಾವಿಸುವುದಿಲ್ಲ. ಸ್ಮೃತಿ ಇರಾನಿಗಿಂತಲೂ ನನಗೆ ಅಮೇಠಿ ಚೆನ್ನಾಗಿ ಗೊತ್ತು," ಎಂದು ಹೇಳಿದ್ದರು. ಅದೀಗ ಸತ್ಯವಾಗುವ ಕ್ಷಣ ಸಮೀಪಿಸಿದೆ.

ಭದ್ರಕೋಟೆ ಮತ್ತೆ ಕೈ ವಶ?

2019ರಲ್ಲಿ ರಾಹುಲ್ ಗಾಂಧಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋಲುವವರೆಗೂ ಅಮೇಠಿ ಹೇಳಿ ಕೇಳಿ ಗಾಂಧಿ ಕುಟುಂಬದ ಭದ್ರಕೋಟೆಯಾಗಿತ್ತು. 2004 ರಿಂದ 2019ರವರೆಗೆ ರಾಹುಲ್‌ ಗಾಂಧಿ ಇದೇ ಅಮೇಠಿ ಲೋಕಸಭಾ ಕ್ಷೇತ್ರ ವನ್ನೇ ಪ್ರತಿನಿಧಿಸಿದ್ದರು.

ಅವರು 2019ರಲ್ಲಿ ಅವರು ಇಲ್ಲಿ ಸೋಲು ಕಂಡರೆ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದರು. ಈ ಬಾರಿ ಅವರು ರಾಹುಲ್‌ ಗಾಂಧಿ ಕೇರಳದ ವಯನಾಡ್‌ ಹಾಗೂ ಅವರ ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರ ದಿಂದ ರಾಹುಲ್‌ ಕಣಕ್ಕಿಳಿದಿದ್ದರು. ಇದರಲ್ಲಿ ಎರಡೂ ಕಡೆ ಅವರು ಗೆಲುವಿನತ್ತ ಮುಖ ಮಾಡದ್ದಾರೆ. ಇತ್ತ ಅವರು ಪ್ರತಿನಿಧಿಸುತ್ತಿದ್ದ ಅಮೇಠಿಯಲ್ಲಿ ಕಾಂಗ್ರೆಸ್‌ ಗೆಲುವಿನತ್ತ ಸಾಗಿದೆ.

Ads on article

Advertise in articles 1

advertising articles 2

Advertise under the article