ಉಡುಪಿ ಟಿವಿ9 ಕೆಮೆರಾಮೆನ್ ದಿನೇಶ್ ಎಂ.ಎಚ್.ಗೆ ಬೀಳ್ಕೊಡುಗೆ

ಉಡುಪಿ ಟಿವಿ9 ಕೆಮೆರಾಮೆನ್ ದಿನೇಶ್ ಎಂ.ಎಚ್.ಗೆ ಬೀಳ್ಕೊಡುಗೆ

ಉಡುಪಿ: ಕಳೆದ ಮೂರು ವರ್ಷಗಳ ಕಾಲ ಉಡುಪಿಯಲ್ಲಿ ಕಾರ್ಯನಿರ್ವಹಿಸಿ ಇದೀಗ ದಾವಣಗೆರೆಗೆ ವರ್ಗಾವಣೆಗೊಂಡ ಟಿವಿ 9 ಟಿವಿ ವಾಹಿನಿಯ ಕ್ಯಾಮೆರಮೆನ್ ಹಾಗೂ ಉಡುಪಿ ಪತ್ರಿಕಾ ಭವನ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ದಿನೇಶ್ ಎಂ.ಎಚ್. ಅವರಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪತ್ರಿಕಾ ಭವನ ಸಮಿತಿಯ ಜಂಟಿ ಆಶ್ರಯದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಗುರುವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ದಿನೇಶ್ ಎಂ.ಎಚ್. ಅವರನ್ನು ಉಡುಪಿ ವಾರ್ತಾಧಿ ಕಾರಿ ಮಂಜುನಾಥ್ ಸನ್ಮಾನಿಸಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ವಹಿಸಿದ್ದರು. ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಪತ್ರಿಕಾ ಭವನ ಸಮಿತಿ ಸಂಚಾಲಕ ಅಜಿತ್ ಆರಾಡಿ, ಸಂಘದ ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು.

ಉಡುಪಿಗೆ ವರ್ಗಾವಣೆಗೊಂಡು ಬಂದಿರುವ ಪ್ರಜಾವಾಣಿ ಜಿಲ್ಲಾ ವರದಿಗಾರ ನವೀನ್ ಕುಮಾರ್ ಜಿ. ಹಾಗೂ ಟಿವಿ 9 ಕೆಮೆರಾಮೆನ್ ರಾಮು ಅವರನ್ನು ಸ್ವಾಗತಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕಾರ್ಯದರ್ಶಿ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕಾ ಭವನ ಸಮಿತಿಯ ಸಹಸಂಚಾಲಕ ಅಂಕಿತ್ ಶೆಟ್ಟಿ ವಂದಿಸಿದರು

Ads on article

Advertise in articles 1

advertising articles 2

Advertise under the article